ನಿವೃತ್ತ ಮೆಸ್ಕಾಂ ಸಿಬ್ಬಂದಿ ವೆಂಕಪ್ಪ ಪೂಜಾರಿ ನಿಧನ
Tuesday, December 24, 2024
ಕೈಕಂಬ : ಕೆಇಬಿ(ಈಗಿನ ಮೆಸ್ಕಾಂ) ನಿವೃತ್ತ ಸಿಬ್ಬಂದಿ, ಧಾರ್ಮಿಕ ಸೇವಾನಿಷ್ಠರಾಗಿದ್ದ ಗುರುಪುರ ಮೂಳೂರು ಗ್ರಾಮದ ನಡುಗುಡ್ಡೆ ನಿವಾಸಿ ವೆಂಕಪ್ಪ ಪೂಜಾರಿ(83) ಅವರು ಡಿ. 23ರಂದು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮಂಗಳವಾರ ಗುರುಪುರ ಅಲೈಗುಡ್ಡೆಯ ಹಿಂದೂ ರುದ್ರಭೂಮಿ(ಮುಕ್ತಿಧಾಮ) ಇಲ್ಲಿ ಅಂತ್ಯ ಸಂಸ್ಕಾರ ನಡೆಯಿತು.