ಡಿ. 28ರಂದು ಗುರುಪುರದಲ್ಲಿ ಶ್ರೀ ಶನೈಶ್ಚರ ಕಥಾಮೃತ ಪೂಜೆ
Tuesday, December 24, 2024
ಕೈಕಂಬ : ಶ್ರೀ ಶನೀಶ್ವರ ಪೂಜಾ ಸಮಿತಿ, ವಿಶ್ವ ಹಿಂದೂ ಪರಿಷತ್ ಬಜರಂಗ ದಳ, ಮಾತೃಶಕ್ತಿ ದುರ್ಗಾವಾಹಿನಿ ವಜ್ರದೇಹಿ ಶಾಖೆ ಗುರುಪುರ ಇದರ 26ನೇ ವರ್ಷದ ಶ್ರೀ ಶನೈಶ್ವರ ಕಥಾಮೃತ ಪೂಜೆ ಡಿ. 28ರಂದು ಮಧ್ಯಾಹ್ನ 12ಕ್ಕೆ ಗುರುಪುರದ ಶ್ರೀ ಜಂಗಮ ಸಂಸ್ಥಾನ ಮಠದಲ್ಲಿ ಜರುಗಲಿದೆ.
ವೇದಮೂರ್ತಿ ಅರುಣ್ ಭಟ್ ಖಂಡಿಗೆ ಇವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಜರುಗಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.