-->


ಸಾಧಕ ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿ  -ಫಾ.ಡಾ ರೋನಾಲ್ಡ್ ಕುಟಿನ್ಹ

ಸಾಧಕ ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿ -ಫಾ.ಡಾ ರೋನಾಲ್ಡ್ ಕುಟಿನ್ಹ




ಬಜಪೆ:ಸಾಧಕ ಹಳೆ ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿ ಹಾಗೂ ಎಲ್ಲರಿಗೂ ಸ್ಪೂರ್ತಿಯಾಗಿ ಇರುವುದು ಸಂಸ್ಥೆಗೆ ಹೆಮ್ಮೆ ಎಂದು ಬಜ್ಪೆ ಸಂತ ಜೋಸೆಫರ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ.ಡಾ ರೋನಾಲ್ಡ್ ಕುಟಿನ್ಹ ಹೇಳಿದರು.ಅವರು  ಬಜ್ಪೆ ಸಂತ ಜೋಸೆಫರ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ
ಬಜ್ಪೆ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ  ಸ್ಟ್ಯಾನಿ ಡಿ''ಸೋಜ,
ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿನಿ ಹಾಗೂ  ಲ್ಯಾಬ್ ಕೊರ್ಪ್ ಡ್ರಗ್ ಡೆವಲಪ್ಮೆಂಟ್ ಕಂಪೆನಿ ಅಮೆರಿಕದ ನಿರ್ದೇಶಕ
ಜಾನಿಶ್ ಕುಟಿನ್ಹ, ಪ್ರಾಕ್ತನ ವಿದ್ಯಾರ್ಥಿ ಲಾರೆನ್ಸ್ ಲೋಬೊ ,ಸಂಸ್ಥೆಯ ಪ್ರಭಾರ ಪ್ರಾಂಶುಪಾಲ  ರಾಮಕೃಷ್ಣ ಉಡುಪ,
ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಮ್ಯಾಕ್ಸಿಮ್ಅಲ್ಮೇಡ ,
ಅಮ್ಮಂದಿರ ಸಂಘದ ಅಧ್ಯಕ್ಷೆ ಶ್ರೀಮತಿ ಶರ್ಮಿಳ ಸಿ ಪೂಜಾರಿ, ಶಾಲಾ ಉಪ ನಾಯಕ ಇಯಾನ್ ಮಥಾಯಸ್ ,ಶಾಲಾ ನಾಯಕಿ ರೀಜಾ ಎಲಿಷಾ ಪಿಂಟೋ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ 
ಮೋಲಿ ಲೋಬೋ ವರದಿ ವಾಚಿಸಿದರು.
ಶಿಕ್ಷಕಿ ಕುಮಾರಿ ನಮಿತಾ ದಾನಿಗಳ ಪಟ್ಟಿಯನ್ನು ವಾಚಿಸಿದರು.ಸಮಾರಂಭದಲ್ಲಿ 
ಶ್ರೀಮತಿ ಜಾನಿಶ್ ಕುಟಿನ್ಹ  ಕೊಡ ಮಾಡಿದ 25,000 ನಗದು ಪುರಸ್ಕಾರವನ್ನು ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿ ಪುರಸ್ಕರಿಸಲಾಯಿತು. ಹಳೆ ವಿದ್ಯಾರ್ಥಿ ಲಾರೆನ್ಸ್ ಲೋಬೋ ನೀಡಿದ ವಿದ್ಯಾರ್ಥಿ ವೇತನವನ್ನು ತಲಾ 5 ಸಾವಿರದಂತೆ ಅರ್ಹ ಆರು ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಫುಟ್ಬಾಲ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಕ್ರೀಡಾಪಟು  ಹಾಗೂ ತರಬೇತುದಾರ ಸಂತೋಷ್ ಮಸ್ಕರೇನಸ್ ಇವರನ್ನು   ಸನ್ಮಾನಿಸಲಾಯಿತು. ಶಾಲಾ   ಮುಖ್ಯೋಪಾಧ್ಯಾಯ  ಅಲ್ವಿನ್ ನೋರೋನ್ಹಾ  ಸ್ವಾಗತಿಸಿದರು. ಶಿಕ್ಷಕ ಲಾನ್ಸಿ ಡಿ'ಸೋಜ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಶ್ರೀಮತಿ ಶಿಲ್ಪ ಡಿ'ಸೋಜಾ ಧನ್ಯವಾದಗೈದರು. ಶಿಕ್ಷಕರಾದ  ಶ್ರೀಮತಿ ಅಜಿತಾ ಕುಮಾರಿ ಲೋಬೋ, ಅಶ್ವಥ್ ನಿಡ್ಡೋಡಿ , ಶ್ರೀಮತಿ ವಂದನ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article