Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರೈಲ್ವೆ ಗೇಟಿಗೆ ಪಿಕಪ್ ವಾಹನ ಡಿಕ್ಕಿ,ತಪ್ಪಿದ ಭಾರೀ ಅನಾಹುತ



ಹಳೆಯಂಗಡಿ:ಪಿಕ್ ಅಪ್ ವಾಹನವೊಂದು  ರೈಲ್ವೆ ಗೇಟಿಗೆ ಡಿಕ್ಕಿಯಾದ ಘಟನೆ ಹಳೆಯಂಗಡಿಯಲ್ಲಿ ನಡೆದಿದೆ.

ಕಿನ್ನಿಗೋಳಿ ಕಡೆಯಿಂದ ಹಳೆಯಂಗಡಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನ ಹಳೆಯಂಗಡಿಯ ಇಂದಿರ ನಗರ  ರೈಲ್ವೇ ಗೇಟ್ ತಲುಪುತ್ತಿದ್ದಂತೆ ಗೇಟ್ ಸಿಬ್ಬಂದಿ ರೈಲು ಬರುವ ಹೊತ್ತಿನಲ್ಲಿ ಗೇಟ್ ಹಾಕಲು ಕರ್ತವ್ಯ ನಿರತರಾದಾಗ ಏಕಾಏಕಿ ಪಿಕಪ್ ನ್ನು  ಚಾಲಕ ಗೇಟ್ ಮೂಲಕ ನುಗ್ಗಿಸಲು ಯತ್ನಿಸಿದಾಗ ಗೇಟ್ ಗೆ ಡಿಕ್ಕಿಯಾಗಿ ಗೇಟ್  ತುಂಡಾಗಿ ಬಿದ್ದಿದೆ.


ರೈಲ್ವೇ ಗೇಟ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.ತಕ್ಷಣ ತಾತ್ಕಾಲಿಕ ನೆಲೆಯಲ್ಲಿ ಕಬ್ಬಿಣದ ರಾಡ್ ಗಳನ್ನು ಅಳವಡಿಸಿ ಗೇಟ್ ಬಳಿ ರಕ್ಷಣೆಯ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪಿಕ್ ಅಪ್ ಚಾಲಕನ ವಿರುದ್ಧ ದೂರು ದಾಖಲಾಗಿದೆ.ಕೆಲವೇ ಹೊತ್ತಿನಲ್ಲಿ ರೈಲು ಬಂದಿದ್ದು ಭಾರೀ ಅಪಾಯ ತಪ್ಪಿದೆ.