-->


ನ. 23ರಂದು ಎಸ್‍ಡಿಎಂ ಮಂಗಳಜ್ಯೋತಿ  ಸಮಗ್ರ ಶಾಲೆಯಲ್ಲಿ `ಕಲೋತ್ಸವ-2024'

ನ. 23ರಂದು ಎಸ್‍ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ `ಕಲೋತ್ಸವ-2024'

 ವಾಮಂಜೂರು : ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ) ಎಸ್‍ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿ ನ. 23ರಂದು ಎಸ್‍ಡಿಎಂ ಶಿಕ್ಷಣ ಸಂಸ್ಥೆ ಉಜಿರೆ ಇದರ ಆಡಳಿತಕ್ಕೊಳಪಟ್ಟ ರಜತ ಮಹೋತ್ಸವ ಸಂದರ್ಭದಲ್ಲಿ ದಿ. ರತ್ನಮ್ಮ ಹೆಗ್ಗಡೆ ಅವರ ಸ್ಮರಣಾರ್ಥ ಉಡುಪಿ ಮತ್ತು ದ. ಕ. ಜಿಲ್ಲಾ ಮಟ್ಟದ ವಿಶೇಷ ಸಾಮಥ್ರ್ಯವುಳ್ಳ ಮಕ್ಕಳಿಗಾಗಿ ಸಾಮಸ್ಕøತಿಕ ಸ್ಪರ್ಧೆ `ಕಲೋತ್ಸವ-2024' ನಡೆಯಲಿದೆ.


ವಾಮಂಜೂರಿನ ಎಸ್‍ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿರುವ ಈ ಸಮಾರಂಭವನ್ನು ಎಸ್‍ಡಿಎಂ ಶಿಕ್ಷಣ ಸಂಸ್ಥೆ(ರಿ) ಉಜಿರೆ ಇದರ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಉದ್ಘಾಟಿಸಲಿದ್ದಾರೆ. ಅಂಗವಿಕಲರ ಕಲ್ಯಾಣ ಸಂಸ್ಥೆ(ರಿ) ಮಂಗಳೂರು ಇದರ ಕಾರ್ಯದರ್ಶಿ ಪ್ರೊ. ಎ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.


ಮನಪಾ ಕಾರ್ಪೊರೇಟರ್ ಭಾಸ್ಕರ್ ಕೆ, ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಸುಚರಿತ ಶೆಟ್ಟಿ, ಅಂಗವಿಕಲರ ಕಲ್ಯಾಣ ಸಂಸ್ಥೆಯ ಖಜಾಂಚಿ ಡಾ. ಕೆ. ದೇವರಾಜ, ಯೂನಿಯನ್ ಬ್ಯಾಂಕ್‍ನ ಹಿರಿಯ ಪ್ರಬಂಧಕ ಸುಧೀಂದ್ರ, ಶಾಲಾ ಆಡಳಿತ ಮಂಡಳಿ ಸದಸ್ಯ, ಉದ್ಯಮಿ ಉದಯ ಕುಮಾರ್ ಕುಡುಪು ಉಪಸ್ಥಿತರಿರುವರು.

Ads on article

Advertise in articles 1

advertising articles 2

Advertise under the article