-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ನ. 24ರಂದು ಗುರುಪುರದಲ್ಲಿ ಅಂಚೆ ಜನಸಂಪರ್ಕ  ಅಭಿಯಾನ, ಆಧಾರ್ ನೋಂದಣಿ-ತಿದ್ದುಪಡಿ ಶಿಬಿರ

ನ. 24ರಂದು ಗುರುಪುರದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ-ತಿದ್ದುಪಡಿ ಶಿಬಿರ

 ಗುರುಪುರ : ಶ್ರೀ ಕೃಷ್ಣ ಮಿತ್ರ ಮಂಡಳಿ(ರಿ) ಗುರುಪುರ ಮತ್ತು ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇವರ ಸಹಯೋಗದಲ್ಲಿ ನ. 24ರಂದು ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ.


ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದೆ. ಜನ್ಮ ದಿನಾಂಕ ಬದಲಾವಣೆಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಅವಶ್ಯ. ಹೆಸರು ಬದಲಾವಣೆಗೆ ಭಾವಚಿತ್ರ, ಪಾನ್ ಕಾರ್ಡ್, ಅಂಕಪಟ್ಟಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ ಅವಶ್ಯ. ವಿಳಾಸ ಬದಲಾವಣೆಗೆ ಪಂಚಾಯತ್‍ನಿಂದ ವಿಳಾಸ ದೃಢೀಕರಣ ಪತ್ರ, ಪಡಿತರ ಚೀಟಿ, ತಹಶೀಲ್ದಾರ್ ಅಥವಾ ಗಜೆಟೆಡ್ ಅಧಿಕಾರಿಯ ಸರ್ಟಿಫಿಕೇಟ್ ಹಾಗೂ ಹೊಸ ಆಧಾರ್ ನೋಂದಣಿಗಾಗಿ, 10 ವರ್ಷ ಕೆಳಗಿನವರಿಗೆ ಜನನ ಪ್ರಮಾಣ ಪತ್ರ, ವಾಸ್ತವ್ಯ ದೃಢೀಕರಣ ಪತ್ರ, ಮೊಬೈಲ್ ಸಂಖ್ಯೆ ಮತ್ತು ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಅವಶ್ಯ.


ಅಂಚೆ ಇಲಾಖೆ-ಸಮಗ್ರ ರಕ್ಷಣಾ ಯೋಜನೆಗಾಗಿ(ಅಪಘಾತ ವಿಮೆ) ಐಪಿಪಿಬಿ ಖಾತೆ ಕಡ್ಡಾಯ. ಇದಕ್ಕಾಗಿ 250 ರೂ. ಖಾತೆ ತೆರೆಯಬಹುದು. ಆಧಾರ್-ಮೊಬೈಲ್ ನಂಬರ್ ತಿದ್ದುಪಡಿಗಾಗಿ ಈಗಾಗಲೇ ಹೊಂದಿರುವ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಅವಶ್ಯ. ಶಿಬಿರದಲ್ಲಿ ಇತರ ಸೇವೆಗಳು ಲಭ್ಯವಿವೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ