ಮಾದಕವ್ಯಸನ ದುಷ್ಪರಿಣಾಮ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ
Saturday, November 30, 2024
ತೋಕೂರು:ಮನುಷ್ಯನು ಆರೋಗ್ಯವಂತನಾಗಿರಬೇಕಾದರೆ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾಸ್ಥ್ಯವನ್ನು ಹೊಂದಿರಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುಜಯ್ ಭಂಡಾರಿ ಹೇಳಿದರು.ಅವರು
ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು,
ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ(ರಿ), ಜಿ. ಎಮ್. ಸ್ಪೋರ್ಟ್ಸ್ ಕ್ಲಬ್(ರಿ), ಸಂಗಮ್ ಫ್ರೆಂಡ್ಸ್ ಕ್ಲಬ್(ರಿ),ಜಪ್ಪಿನ ಮೊಗರು, ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ.
ಇವರ ಸಹಯೋಗದೊಂದಿಗೆ
ಬುಧವಾರದಂದು ದ ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ(ರಿ) ಜಪ್ಪಿನಮೊಗರುವಿನ ಸಭಾಂಗಣದಲ್ಲಿ ನಡೆದ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜನಜಾಗೃತಿ ಹಾಗೂ ಮಾದಕ ವ್ಯಸನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ ಜಿಲ್ಲಾ ವೈದ್ಯಾಧಿಕಾರಿ ಡಾ! ಎಚ್.ಆರ್. ತಿಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರಾವಳಿ ಕಾವಲು ಪಡೆಯ ಪೋಲಿಸ್ ಅಧಿಕಾರಿ ಪ್ರಮೋದ್ ಕುಮಾರ್,
ನೆಹರು ಯುವಕೇಂದ್ರ ಮಂಗಳೂರು ಇಲ್ಲಿನ ಅಧಿಕಾರಿ ಜಗದೀಶ್.ಕೆ, ಸುಧಾಕರ್.ಜಿ, ಎಮ್. ದಿವಾಕರ್, ದೀಪಕ್ ಸುವರ್ಣ,ಎ.ಜನಾರ್ಧನ್,ದಿನಕರ್ ಕುಲಾಲ್ ,ಮುರಳೀಕೃಷ್ಣ ಹಾಗೂ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು.
ಜಿ.ಎಮ್.ಸ್ಪೋಟ್ಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು.ಸಂಗಮ್ ಫ್ರೆಂಡ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಶ್ರೀನಿವಾಸ.ಕೆ.ವಂದಿಸಿದರು.
ಶ್ರೀ ಕೃಷ್ಣ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.