ಡಿ. 1 : ಕೆರೆಕಾಡು ಶ್ರೀ ವಿನಾಯಕ ಯಕ್ಷಕಲೋತ್ಸವ
Thursday, November 28, 2024
ಮೂಲ್ಕಿ:ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಇದರ ಸಂಯೋಜನೆಯಲ್ಲಿ ಡಿಸೆಂಬರ್ ಒಂದರಂದು ಶ್ರೀ ವಿನಾಯಕ ಯಕ್ಷ ಕಲೋತ್ಸವ 2024 ಕಾರ್ಯಕ್ರಮವು ಎಸ್ ಕೋಡಿ ಪದ್ಮಾವತಿ ಲಾನ್ ನಲ್ಲಿ ನಡೆಯಲಿದೆ.
ಸಂಜೆ 3ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಅಲಂಗಾರು ಸುಬ್ರಹ್ಮಣ್ಯ ಭಟ್ ಅವರ ಶುಭ ಶಂಸನೆಯೊಂದಿಗೆ ನಡೆಯಲಿದೆ. ಅತಿಥಿಗಳಾಗಿ ಅಭಯಚಂದ್ರ ಜೈನ್, ಮಿಥುನ್ ಎಂ. ರೈ, ಶ್ರೀಕಾಂತ್ ಕೆ, ಭುವನಾಭಿರಾಮ ಉಡುಪ, ಬೋಳ ರವಿ ಪೂಜಾರಿ, ಧೀರಜ್ ಶೆಟ್ಟಿ, ನವೀನ್ ಹರಿಪಾದೆ, ದಿವಾಕರ ಕರ್ಕೇರ, ಧನಂಜಯ ಶೆಟ್ಟಿಗಾರ್,ಕಿಶೋರ್ ಕುಮಾರ್, ಗೋಪಾಲಕೃಷ್ಣ ಪುನರೂರು, ಜ್ಯೋತಿ ಪ್ರಶಾಂತ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಿನ್ನಿಗೋಳಿ ಮೆಸ್ಕಾಂನ ಸುಧಾಕರ ಪೂಜಾರಿ, ಕಾರ್ಕಳದ ಉದ್ಯಮಿ ದೇವದಾಸ್ ಶೆಟ್ಟಿಗಾರ್, ಮೂಡಬಿದ್ರೆ ಕಲಾಪೋಷಕ ನವೀನ್ ಚಂದ್ರ ಕರ್ಕೇರ, ಹಾಗೂ ಪಕ್ಷಿಕೆರೆಯ ಶ್ರೀ ವಿನಾಯಕ ಮಿತ್ರ ಮಂಡಳಿ ಇವರಿಗೆ ಯಕ್ಷಕಲೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಯಕ್ಷಕಲಾ ಗೌರವ ಪುರಸ್ಕಾರವನ್ನು ಯುವ ಪ್ರತಿಭೆಗಳಾದ ನೀಲೇಶ್ ಆಚಾರ್ಯ, ಶಶಾಂಕ್ ಪೂಜಾರಿ, ತನುಶ್ರೀ ಕೆರೆಕಾಡು, ರಶ್ಮಿಕೆರೆಕಾಡು ಅವರಿಗೆ ನೀಡಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪಾರಿಜಾತ, ಶ್ರೀರಾಮ ಕಥಸಾರ, ಲವಕುಶ ಕಾಳಗ ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಲಿದೆ ಎಂದು ಯಕ್ಷಕಲಾ ಫೌಂಡೇಶನ್ ನ ಸಂಸ್ಥಾಪಕ ಜಯಂತ್ ಅಮೀನ್ ಕೆರೆಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.