ಹೆಜ್ಜೇನು ಕಡಿತ,ದಿನಪತ್ರಿಕೆ ವಿತರಕ ಸಾವು
Saturday, November 30, 2024
ಬಜಪೆ:ಹೆಜ್ಜೇನು ಕಡಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.ಪೇಜಾವರ ಪಡ್ಡೋಡಿಯ ನಿವಾಸಿ ಪುಷ್ಪರಾಜ ಶೆಟ್ಟಿ(45) ಮೃತರು.ಬಜಪೆ ಸಮೀಪದ ಕೆಂಜಾರು ಎಂಬಲ್ಲಿ ನಡೆದುಕೊಂಡು ಹೊಗುತ್ತಿದ್ದ ಅವರಿಗೆ ಹೆಜ್ಜೇನು ದಾಳಿ ಮಾಡಿತ್ತು.
ಅವರು ಬಜಪೆ ಸಮೀಪದ ಪೊರ್ಕೋಡಿ ಪರಿಸರದಲ್ಲಿ ಮನೆ ಮನೆಗೆ ಕಾಲುನಡಿಗೆಯಲ್ಲಿಯೇ ಸಾಗಿ ದಿನಪತ್ರಿಕೆಗಳನ್ನು ವಿತರಿಸುವ ಕಾರ್ಯವನ್ನು ಮಾಡುತ್ತಿದ್ದರು.
ಮೃತರು ಅವಿವಾಹಿತರಾಗಿದ್ದು ಮೂವರು ಸಹೋದರರು ಹಾಗೂ ಸಹೋದರಿಯನ್ನು ಆಗಲಿದ್ದಾರೆ