ರಾಜ್ಯ ಸರ್ಕಾರಿ ನೌಕರರ ಜಿಲ್ಲಾಸಂಘದ ನಿರ್ದೇಶಕರಿಗೆ ಸನ್ಮಾನ
Saturday, November 30, 2024
ಮಂಗಳೂರು : ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಮಂಗಳೂರು ತಾಪಂ ವ್ಯವಸ್ಥಾಪಕಿ ಸುವರ್ಣಾ ಜಿ. ಹೆಗ್ಡೆ ಮತ್ತು ಉಳ್ಳಾಲ ತಾಲೂಕು ಹರೇಕಳ ಗ್ರಾಮದ ಪಿಡಿಒ ಮುತ್ತಪ್ಪ ಅವರನ್ನು ನ. 29ರಂದು ತಾಲೂಕು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು.
ಮಂಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ(ಇಒ) ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ರಾಜ್‍ನ ಸಹಾಯಕ ನಿರ್ದೇಶಕ ಹಾಗೂ ನೀರುಮಾರ್ಗ ಪಂಚಾಯತ್ ಪಿಡಿಒ ಅಬೂಬಕ್ಕರ್, ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಮಹೇಶ್ ಅಂಬೇಕಲ್, ಸಹಾಯಕ ಲೆಕ್ಕಾಧಿಕಾರಿ ಪರಮೇಶ್ವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಿಡಿಒಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ತಾಪಂ ಸಿಬ್ಬಂದಿ ವರ್ಗ, ನರೇಗಾ ಶಾಖೆಯ ಸಿಬ್ಬಂದಿ ಹಾಜರಿದ್ದರು. ಮೂಲ್ಕಿ ತಾಪಂ ನಿರ್ದೇಶಕ ಪ್ರದೀಪ್ ಡಿ'ಸೋಜ ಕಾರ್ಯಕ್ರಮ ನಿರೂಪಿಸಿದರು.