ಸುರತ್ಕಲ್ ನಲ್ಲಿ ಹೊತ್ತಿ ಉರಿದ ಕಾರು
Wednesday, November 20, 2024
ಸುರತ್ಕಲ್: ಸುರತ್ಕಲ್ ಕಟ್ಲಾ ಆಶ್ರಯ ಕಾಲೋನಿಯಲ್ಲಿ ಅಂಗನವಾಡಿ ಶಾಲೆಯ ಎದುರು ನಿಲ್ಲಿಸಿದ್ದ ಕಾರೊಂದು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಮಂಗಳವಾರ ನಡೆದಿದೆ.
ಕಾರು ಬೆಂಕಿಗಾಹುತಿಯಾಗುತ್ತಿದ್ದಂತೆ ಸ್ಥಳೀಯರು, ಕದ್ರಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ.