ನ. 30-2ರತನಕ ಗುರುಪುರ ಜಂಗಮಸಂಸ್ಥಾನ ಮಠದಲ್ಲಿ ಲಕ್ಷ ದೀಪೋತ್ಸವ
Wednesday, November 20, 2024
ಕೈಕಂಬ : ಗುರುಪುರದ ಶ್ರೀ ಜಂಗಮ ಸಂಸ್ಥಾನ ಮಠದಲ್ಲಿ ನ. 30ರಿಂದ ಡಿಸೆಂಬರ್ 2ರವರೆಗೆ ಶ್ರೀ ನೀಲಕಂಠೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಜರುಗಲಿದೆ.
ನ. 30ರಂದು ಪ್ರಾತಃಕಾಲ 5ಕ್ಕೆ ಶ್ರೀ ನೀಲಕಂಠೇಶ್ವರ ಸ್ವಾಮಿಯ ಪ್ರಾರ್ಥನೆ, 5:15ಕ್ಕೆ ತೋರಣ ಮುಹೂರ್ತ, ನಂದಿ ಧ್ವಜಾರೋಹಣ, ಗಣಹೋಮ, ನವಗ್ರಹ ಹೋಮ, ಶ್ರೀ ರುದ್ರಹೋಮ, ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ, ಸಂಜೆ 6:30ಕ್ಕೆ ಶ್ರೀ ನೀಲಕಂಠೇಶ್ವರ ಸ್ವಾಮಿಯ ರಥಾರೋಹಣ, 8ಕ್ಕೆ ಪಲ್ಲಕಿ ಉತ್ಸವ, ಶಯನೋತ್ಸವ ನಡೆಯಲಿದೆ.
ಡಿಸೆಂಬರ್ 1ರಂದು ಶ್ರೀ ದೇವರಿಗೆ ಉತ್ತಿಷ್ಠ ಪೂಜೆ, ಓಕುಳಿ ಸ್ನಾನ, ಅವಭೃತ ಉತ್ಸವ, ಸಂಜೆ 7:30ಕ್ಕೆ ಮರು ದೀಪೋತ್ಸವ 8: 30ಕ್ಕೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 9ರಿಂದ ಶ್ರೀ ನೀಲಕಂಠೇಶ್ವರ ಯಕ್ಷಗಾನ ಕಲಾಕೇಂದ್ರ ಗುರುಪುರ ಇದರ ಕಲಾವಿದರಿಂದ `ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಡಿ. 2ರಂದು ಬೆಳಿಗ್ಗೆ 9ಕ್ಕೆ ಶ್ರೀ ಸಿದ್ದೇಶ್ವರ ಶಿವಯೋಗಿಗಳ ಆರಾಧನಾ ಮಹೋತ್ಸವ, 12ಕ್ಕೆ ಶ್ರೀ ಗುರುಗಳ ಮಹಾಪೂಜೆ, 12:30ಕ್ಕೆ ಅನ್ನ ಸಂತರ್ಪಣೆ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.