-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಪುರುಷರು ಸಮಾಜಕ್ಕೆ, ಸಮುದಾಯಕ್ಕೆ, ಕುಟುಂಬಕ್ಕೆ ನೀಡುವ ಸಕಾರಾತ್ಮಕ ಮೌಲ್ಯಗಳನ್ನು ಗುರುತಿಸಿ : ಅ. ವಂ. ಓಸ್ವಾಲ್ಡ್ ಮೊಂತೆರೊ

ಪುರುಷರು ಸಮಾಜಕ್ಕೆ, ಸಮುದಾಯಕ್ಕೆ, ಕುಟುಂಬಕ್ಕೆ ನೀಡುವ ಸಕಾರಾತ್ಮಕ ಮೌಲ್ಯಗಳನ್ನು ಗುರುತಿಸಿ : ಅ. ವಂ. ಓಸ್ವಾಲ್ಡ್ ಮೊಂತೆರೊ

 


ಕಿನ್ನಿಗೋಳಿ:ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಮಂಗಳೂರು ಉತ್ತರ ವಲಯದ ವತಿಯಿಂದ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಕಿರೆಂ ಚರ್ಚ್ ಸಭಾಂಗಣದಲ್ಲಿ ಆಚರಿಸಲಾಯಿತು. ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಅ. ವಂ. ಓಸ್ವಾಲ್ಡ್ ಮೊಂತೆರೊರವರು ಮಾತನಾಡಿ, ಪುರುಷರು ಸಮಾಜಕ್ಕಾಗಿ, ಸಮುದಾಯಕ್ಕಾಗಿ, ಕುಟುಂಬಕ್ಕಾಗಿ ನಿರಂತರವಾಗಿ ಹಲವಾರು ತ್ಯಾಗಗಳನ್ನು ಮಾಡುತ್ತಾರೆ. ಅವರ ಸಕಾರಾತ್ಮಕ ಮೌಲ್ಯಗಳನ್ನು ಗುರುತಿಸಿ ಅವರನ್ನು ಗೌರವಿಸಬೇಕು ಎಂದರು. 


ಸಾಮಾಜಿಕ ಕಾರ್ಯಕರ್ತ ಡಾ. ಸಿ. ಸೆವ್ರಿನ್ ಮಿನೇಜಸ್ ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದು, ಪುರುಷರ ದಿನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಏಳಿಂಜೆ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ಡಿಕೋಸ್ತಾರವರನ್ನು   ಸನ್ಮಾನಿಸಲಾಯಿತು. ಮಾಹಿತಿ ಕಾರ್ಯಾಗಾರದ ಜೊತೆಗೆ ಮನೋರಂಜನಾ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಅಧ್ಯಕ್ಷ ಕು. ಮೆಲ್ರೀಡ ಜೇನ್ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ಶಾಂತಿ ಸಲ್ಡಾನಾ, ಖಜಾಂಚಿ ಜೇಮ್ಸ್ ಲೋಬೊ, ನಿಕಟ ಪೂರ್ವ ಅಧ್ಯಕ್ಷ  ಫ್ರಾನ್ಸಿಸ್ ಸೆರಾವೊ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮತಿ ಪ್ರಮೀಳಾ ತಾವ್ರೊ ಕಾರ್ಯಕ್ರಮವನ್ನು ನಿರೂಪಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ