ಡಾ| ಪಾದೂರು ಗುರುರಾಜ ಭಟ್ - ನೂರರ ನೆನಪು ಕಾರ್ಯಕ್ರಮ
Tuesday, November 19, 2024
ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಡಾ| ಪಾದೂರು ಗುರುರಾಜ ಭಟ್‌ರವರ 100ರ ನೆನಪು ಕಾರ್ಯಕ್ರಮವು ನವೆಂಬರ್ 24ರಂದು ಅಪರಾಹ್ನ ಗಂಟೆ ೩ಕ್ಕೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಜರಗಲಿದೆ. ಇತಿಹಾಸ ತಜ್ಞರಾದ ಮೂಡುಬಿದ್ರೆ ಡಾ| ಪುಂಡಿಕಾ ಗಣಪಯ್ಯ ಭಟ್‌ರವರು ಪಾದೂರು ಗುರುರಾಜ ಭಟ್‌ರವರ ನುಡಿನಮನ ಮಾಡಲಿರುವರು. ಅಧ್ಯಕ್ಷತೆಯನ್ನು ಕೊಡೆತ್ತೂರು ನಯನಾಭಿರಾಮ ಉಡುಪ ವಹಿಸಲಿರುವರು. ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್‌ನ ಕೋಶಾಧಿಕಾರಿ ಪಿ. ಪರಶುರಾಮ ಭಟ್, ಅಗರಿ ಎಂಟರ್‌ಪೈಸಸ್‌ನ ಅಗರಿ ರಾಘವೇಂದ್ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ನಿವೃತ್ತ ಪ್ರಾಧ್ಯಾಪಕರಾದ ಬಾಲಕೃಷ್ಣ ಉಡುಪ, ಕರ್ನಾಟಕ ಜಾನಪದ ಪರಿಷತ್ತು ಮುಡುಬಿದ್ರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್ ಹಾಗೂ ಇನ್ನಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾಯ್ಸ್ ಆಫ್ ಆರಾಧನಾ ತಂಡದವರಿಂದ ಸಂಗೀತ ಕಾರ್ಯಕ್ರಮ ಜರಗಲಿದೆ ಎಂದು ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.