-->


ಸಾಮ್ರಾಟ್ ಫ್ರೆಂಡ್ಸ್ ಕ್ಲಬ್ (ರಿ) ಕುಡುಪು ಕಟ್ಟೆ, ನೂತನ ಕಟ್ಟಡ ಮತ್ತು ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಸಾಮ್ರಾಟ್ ಫ್ರೆಂಡ್ಸ್ ಕ್ಲಬ್ (ರಿ) ಕುಡುಪು ಕಟ್ಟೆ, ನೂತನ ಕಟ್ಟಡ ಮತ್ತು ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಕುಡುಪು:ಕಳೆದ ಅನೇಕ ವರುಷಗಳಿಂದ ಕುಡುಪು ಪರಿಸರದಲ್ಲಿ ನಿಸ್ವಾರ್ಥವಾಗಿ ಸಾಮಾಜಿಕ ಕಾರ್ಯವನ್ನು ಮಾಡುತ್ತ ಮನೆ ಮಾತಾಗಿರುವ ಸಾಮ್ರಾಟ್ ಫ್ರೆಂಡ್ಸ್ ಕ್ಲಬ್ (ರಿ) ಕುಡುಪು ಕಟ್ಟೆ, ಕುಡುಪು ಇದರ ನೂತನ ಕಟ್ಟಡ ಮತ್ತು ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ವೈ ಭರತ್ ಶೆಟ್ಟಿ ಯವರು ಭಾಗವಹಿಸಿದರು.
 ಪರಮಪೂಜ್ಯ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದಂಗಳವರು (ಶ್ರೀ ಕಾಣಿಯೂರು ಮಠ ಉಡುಪಿ) ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ  ನಳಿನ್ ಕುಮಾರ್ ಕಟೀಲ್ (ನಿಕಟಪೂರ್ವ ರಾಜ್ಯಾಧ್ಯಕ್ಷರು, ಬಿಜೆಪಿ ಕರ್ನಾಟಕ) ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ನೂತನ ಕಟ್ಟಡದ ಜೊತೆಗೆ ಅಂಗನವಾಡಿ ಕಟ್ಟಡದ ಅಭಿವೃದ್ಧಿಯನ್ನೂ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ದಾದಿಯರ ಉಪಕೇಂದ್ರದ ವ್ಯವಸ್ಥೆಯನ್ನೂ ಕಲ್ಪಿಸಿದ ಸಾಮ್ರಾಟ್ ಫ್ರೆಂಡ್ಸ್ ಕ್ಲಬ್ ನ ಯುವಕರ ಕಾರ್ಯಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article