-->


ಕನ್ನಡ ಭಾಷೆಗೆ ಸಂಬಂಧ ಪಟ್ಟ ಕಾರ್ಯಕ್ರಮಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವೇ  - ಡಾ.ಹರಿಕೃಷ್ಣ ಪುನರೂರು

ಕನ್ನಡ ಭಾಷೆಗೆ ಸಂಬಂಧ ಪಟ್ಟ ಕಾರ್ಯಕ್ರಮಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವೇ - ಡಾ.ಹರಿಕೃಷ್ಣ ಪುನರೂರು

ಕಿನ್ನಿಗೋಳಿ  :ಕನ್ನಡ ಉಳಿಸಿ ಕನ್ನಡ ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ.ಕನ್ನಡವನ್ನು ಉಳಿಸುವ ಕಾರ್ಯ ಆಗಿಲ್ಲ.ಕಳೆದ ಹಲವು ವರ್ಷಗಳಿಂದ ಕನ್ನಡ ಶಾಲೆಗಳಿಗೆ ಅಧ್ಯಾಪಕರ ಕೊರತೆ ಇದ್ದು,ಇನ್ನೂ ಕೂಡ ಅಧ್ಯಾಪಕರ ನೇಮಕವಾಗಿಲ್ಲ.ಸರ್ಕಾರ ಈ ಬಗ್ಗೆ ಗಮನಹರಿಸಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಅವರು ಹೇಳಿದರು.ಅವರು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ  ಪುರಸ್ಕೃತ 78 ನೇ ವರ್ಷದ ಸಂಭ್ರಮದಲ್ಲಿರುವ ದಿ.ಕೊ.ಅ ಉಡುಪರಿಂದ ಸಂಸ್ಥಾಪಿಸಲ್ಪಟ್ಟ  ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ  ಸಾಹಿತಿ  ಮೋಹನದಾಸ ಸುರತ್ಕಲ್ ಅವರು 'ಕನ್ನಡ ಭಾಷೆ ಉಳಿಸಿ ಬೆಳೆಸೋಣ ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

 ಈ ಸಂದರ್ಭ ಹಿರಿಯ ಸಾಹಿತಿ ವಾಸ್ತು ತಜ್ಞ ಡಾ.ಪದ್ಮನಾಭ ಭಟ್ ಎಕ್ಕಾರು,ಹಿರಿಯ ತಜ್ಞ ವ್ಯವಸಾಯಗಾರ  ಬೋಜ ದೇವಾಡಿಗ ಎಣ್ಣೆಗೇರಿ,ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ,ಪದ್ಮನಾಭ ಪಕ್ಷಿಕೆರೆ,ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವಕ ಮಂಡಲ  ಮತ್ತು ಖುಷಿ ಮಹಿಳಾ ಮಂಡಲ ಸಂಕಲಕರಿಯ ,
ಮೂಲ್ಕಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಹಾಗೂ ಪತ್ರಕರ್ತ ಪ್ರಕಾಶ್ ಸುವರ್ಣ ಮೂಲ್ಕಿ ಇವರನ್ನು ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಅಗರಿ ರಾಘವೇಂದ್ರ ರಾವ್ ,ಕರ್ನಾಟಕ ಜಾನಪದ ಪರಿಷತ್ತಿನ  ಮೂಡಬಿದಿರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀಭಟ್,ಸಾಹಿತಿ ಮೋಹನದಾಸ ಸುರತ್ಕಲ್ , ಸಾಹಿತಿ ಉದಯ ಕುಮಾರ ಹಬ್ಬು,ದೈಜಿವಲ್ಡ್ ನ ಹೇಮಾಚಾರ್ಯ ಮೂರುಕಾವೇರಿ,ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ.ಸುಧಾರಾಣಿ  ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು.ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಶಶಿಕಲಾ ಕೆಮ್ಮಡೆ ಅವರಿಂದ ಕನ್ನಡ ಗೀತಗಾಯನ ಹಾಗೂ ವಾಯ್ಸ್ ಅಫ್ ಆರಾಧನಾ ತಂಡದವರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು.

Ads on article

Advertise in articles 1

advertising articles 2

Advertise under the article