-->


ಕಿನ್ನಿಗೋಳಿಯಲ್ಲಿ ಗೋಪೂಜೆ

ಕಿನ್ನಿಗೋಳಿಯಲ್ಲಿ ಗೋಪೂಜೆ

ಕಿನ್ನಿಗೋಳಿ: ವಿಶ್ವ ಹಿಂದು ಪರಿಷತ್ತು ಹಾಗೂ ಭಜರಂಗ ದಳ ಮೂಲ್ಕಿ ತಾಲೂಕು ಘಟಕದಿಂದ ಗೋಪೂಜೆ ಕಾರ್ಯಕ್ರಮವು ಕಿನ್ನಿಗೋಳಿ ಮಹಮ್ಮಾಯೀ ಕಟ್ಟೆಯ ಬಳಿ ನಡೆಯಿತು. ಗೋಮಾತೆಯನ್ನು ಪೂಜಿಸುವ ಮೂಲಕ ಸಕಲ ಇಷ್ಟಾರ್ಥಗಳು ನೆರವೇರಿ ಬದುಕಿನುದ್ದಕ್ಕೂ ಸನ್ಮಂಗಲವನ್ನು ಉಂಟುಮಾಡಲಿ, ನಾಡಿಗೆ, ಲೋಕಕ್ಕೆ ಕಲ್ಯಾಣ ಉಂಟುಮಾಡಲಿ  ಎಂದು ಕೊಡೆತ್ತೂರು ಭುವನಾಭಿರಾಮ ಉಡುಪರು ಹೇಳಿದರು. ಈ ಸಂದರ್ಭ ವಿಶ್ವ ಹಿಂದು ಪರಿಷತ್ತ್ತು ಹಾಗೂ ಭಜರಂಗ ದಳ  ಮೂಲ್ಕಿ  ತಾಲೂಕು ಘಟಕದ ಶ್ಯಾಮಸುಂದರ್, ಯಜ್ಞಾತ ಆಚಾರ್ಯ, ಅಶೋಕ ಕೆಮ್ಮಡೆ, ಶಶಿ ಲಿಂಗಪ್ಪಯ್ಯಕಾಡು, ಧನುಷ್ ಮೂಲ್ಕಿ, ಕೀರ್ತನ್ ಕೆರೆಕಾಡು, ಗೌತಮ್ ಹೊಸಕಾಡು, ಸುಬ್ರಹ್ಮಣ್ಯ ಶೆಣೈ, ರವಿಚಂದ್ರ, ರಾಜೇಶ್ ಎಸ್.ಕೋಡಿ, ಕಿಶೋರ್ ಶೆಟ್ಟಿ, ಕೇಶವ ಕೋಟ್ಯಾನ್, ಸುಮಿತ್‌ಕುಮಾರ್, ಕಿಶೋರ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಹೆಬ್ಬಾರ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article