ಹರಿಹರ ಶ್ರೀ ರಾಮ ಭಜನಾ ಮಂದಿರ ಗೋಳಿಜೋರ, ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸುವರ್ಣ ಭಜನಾ ಮಂಗಲೋತ್ಸವದ ಸವಿನೆನಪಿಗಾಗಿ ನೂತನ ಸ್ವಾಗತ ಗೋಪುರದ ಶಿಲಾನ್ಯಾಸ ಸಮಾರಂಭ
Monday, November 4, 2024
ಕಿನ್ನಿಗೋಳಿ:ಹರಿಹರ ಶ್ರೀ ರಾಮ ಭಜನಾ ಮಂದಿರ ಗೋಳಿಜೋರ ಇಲ್ಲಿನ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸುವರ್ಣ ಭಜನಾ ಮಂಗಲೋತ್ಸವದ ಸವಿನೆನಪಿಗಾಗಿ ನೂತನ ಸ್ವಾಗತ ಗೋಪುರದ ಶಿಲಾನ್ಯಾಸ ಸಮಾರಂಭವು ಭಾನುವಾರ ನಡೆಯಿತು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಶಿಲಾನ್ಯಾಸವನ್ನು ನೆರವೇರಿಸಿದರು.ಈ ಸಂದರ್ಭ ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ವಿಜ್ಞಾಪನಾ ಪತ್ರವನ್ನು ಉದ್ಯಮಿ ಅಭಿಲಾಷ್ ಶೆಟ್ಟಿ ಕಟೀಲು ಬಿಡುಗಡೆಗೊಳಿಸಿದರು. ಶಂಕರ ಭಟ್ ಎಳತ್ತೂರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವೇದವ್ಯಾಸ ಉಡುಪ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಪುರಂದರ ಡಿ ಶೆಟ್ಟಿಗಾರ್, ಪ್ರೇಮ್ ರಾಜ್ ಶೆಟ್ಟಿ, ಗಂಗಾಧರ ಶೆಟ್ಟಿಗಾರ್, ಮುಖ್ಯಪ್ರಾಣ ಕಿನ್ನಿಗೋಳಿ, ಸುಂದರ ಶೆಟ್ಟಿಗಾರ್ ಉದಕಗಿರಿ, ಶಯನ್ ಶೆಟ್ತಿಗಾರ್, ರಾಮ ಗುರಿಕಾರ, ಶಂಕರ್ ಮಾಸ್ಟರ್, ಸಂಜೀವ ಬಿ, ಚಂದ್ರ ಶೇಖರ್, ಯೋಗೀಶ್, ಚೇತನ್, ರಾಮ ಸಾಲಿಯಾನ್ ರಘು ಗೋಳೀಜೋರ, ಶಶೀಂದ್ರ, ಶರತ್ ಶೆಟ್ಟಿ, ಜಗದೀಶ್, ವೀರಪ್ಪ, ಸಂತೋಷ್ ಕುಜಿಂಗಿರಿ, ಉದ್ಯಮಿ ದಯಾನಂದ ಶೆಟ್ಟಿ ಎಳತ್ತೂರು,ರಾಜೇಶ್ .ವಿ ,ಸಂಜೀವ. ಜಿ, ವೆಂಕಪ್ಪ ಗೋಳಿ ಜೋರಾ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿದರು.