ಚಿರತೆ ದಾಳಿಗೆ ವ್ಯಕ್ತಿಗೆ ಗಾಯ,ಅರಣ್ಯಾಧಿಕಾರಿಗಳಿಂದ ಚಿರತೆ ಸೆರೆಗೆ ಬೋನ್ ಆಳವಡಿಕೆ
Tuesday, November 5, 2024
ಕಿನ್ನಿಗೋಳಿ:ಚಿರತೆ ದಾಳಿಗೆ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆಯು ಕಿನ್ನಿಗೋಳಿ ಸಮೀಪದ ಎಳತ್ತೂರು ಎಂಬಲ್ಲಿ ಕಳೆದ ಕೆಲದಿನಗಳ ಹಿಂದೆ ನಡೆದಿತ್ತು.ಎಳತ್ತೂರಿನ ಕಲ್ಕರೆ ನಿವಾಸಿ ( 58)ಗಾಯಗೊಂಡವರು.ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಮೂಡಬಿದಿರೆ ವಲಯದ ಅರಣ್ಯ ಇಲಾಖೆಯ ಅಧಿಕಾರಿ ನಾಗೇಶ್ ಬಿಲ್ಲವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಚಿರತೆಯ ಸೆರೆಗೆ ಎಳತ್ತೂರು ದೇವಸ್ಥಾನದ ದೇವರ ಗುಂಡಿ ಸಂಕದ ಕೆರೆ ಬಳಿ ಬೋನ್ ಆಳವಡಿಸಿದ್ದಾರೆ.