ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ನಿಂದ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲಾ ಖೋ ಖೋ ತಂಡಕ್ಕೆ ಕ್ರೀಡಾ ಸಮವಸ್ತ್ರ ವಿತರಣೆ
Tuesday, November 5, 2024
ಬಜಪೆ:ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇವರ ವತಿಯಿಂದ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಇಲ್ಲಿನ ಮೈಸೂರು ವಿಭಾಗ ಮಟ್ಟದಲ್ಲಿ ಭಾಗವಹಿಸುವ ಖೋ ಖೋ ತಂಡಕ್ಕೆ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು. ಟ್ರಸ್ಟ್ ನ ಅಧ್ಯಕ್ಷ ರಂಜಿತ್ ಶೆಟ್ಟಿ, ಕಾರ್ಯದರ್ಶಿ ಗಂಗಾಧರ ಶೆಟ್ಟಿ, ಸದಸ್ಯ ಪರೀಕ್ಷಿತ್, ಹಳೆ ವಿದ್ಯಾರ್ಥಿ ಅಮೃತೇಶ್,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್,ಶಿಕ್ಷಕರಾದ ಪೂರ್ಣಿಮಾ, ಚಿತ್ರಾಶ್ರೀ ಕೆ. ಎಸ್.,ವಿನ್ನಿ ನಿರ್ಮಲ ಡಿಸೋಜ, ಜ್ಯೋತಿ ಉಪಸ್ಥಿತರಿದ್ದರು.