ಮಾದಕವಸ್ತು (ಎಂಡಿಎಂಎ)ಮಾರಾಟ ,ಇಬ್ಬರ ಬಂಧನ
Tuesday, November 5, 2024
ಬಜಪೆ :ಮಾದಕ ವಸ್ತು (ಎಂಡಿಎಂಎ)ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ 62 ನೇ ತೋಕೂರು ಗ್ರಾಮದ ಜೋಕಟ್ಟೆಯ ನಿವಾಸಿ ಉಮ್ಮರ್ ಫಾರೂಕ್ ಹಾಗೂ ಮಂಗಳೂರು ತಾಲೂಕಿನ ಬಜಪೆಯ ಜರಿನಗರದ ನಿವಾಸಿ ಮೊಹಮ್ಮದ್ ಅಬ್ದುಲ್ ಜುನೈದ್ ಎಂದು ಗುರುತಿಸಲಾಗಿದೆ.ನ.2 ರಂದು ಬಜಪೆ ಪೊಲಿಸ್ ಠಾಣೆಯ ಪಿಎಸ್ ಐ ರೇವಣಸಿದ್ದಪ್ಪ ಹಾಗೂ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ತೆಂಕಎಕ್ಕಾರು ಗ್ರಾಮದ, ಬಜಪೆಯಿಂದ ಕಟೀಲು ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಪೆ ರ್ಮುದೆ ಗ್ರಾಮ ಪಂಚಾಯತ್ ಕ್ರಾಸ್ ನಿಂದ ಸ್ವಲ್ಪ ಮುಂದೆ ಮಾದಕವಸ್ತು (ಎಂಡಿಎಂಎ) ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದು,ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸುಮಾರು 50,000/- ರೂಪಾಯಿ ಮೌಲ್ಯದ 9.11 ಗ್ರಾಂ ತೂಕದ ಮಾದಕವನ್ನು (ಎಂಡಿಎಂಎ) 10,000/- ರೂಪಾಯಿ ಮೌಲ್ಯದ 2 ಮೊಬೈಲ್ ಪೋನ್ ಗಳು, 50,000/- ರೂಪಾಯಿ ಮೌಲ್ಯದ ಬೈಕ್ ಹಾಗು ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ,ಆರೋಪಿಗಳ ವಿರುದ್ಧ ಮಾದಕ ವಸ್ತು ಕಾಯ್ದೆಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಪ್ರಸ್ತುತ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟುವಲ್ಲಿ ವಿಶೇಷ ಕಾರ್ಯಚರಣೆ ನಡೆಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಐಪಿಎಸ್ ರವರ ಮಾರ್ಗದರ್ಶನದಂತೆ,ಡಿಸಿಪಿ ಸಿದ್ದಾರ್ಥ ಗೋಯೆಲ್ (ಕಾ&ಸು) ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ ಕೆ ,ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್ ಜಿ.ಎನ್ ನೇತೃತ್ವದಲ್ಲಿ ಪಿಎಸ್ ಐ ರೇವಣಸಿದ್ದಪ್ಪ, ಪಿಎಸ್ ಐ ಕುಮಾರೇಶನ್, ಪಿಎಸ್ ಐ ಲತಾ, ಸಿಬ್ಬಂದಿಯವರಾದ ರಶೀದ ಶೇಖ್, ಸುಜನ್, ದುರ್ಗಾ ಪ್ರಸಾದ, ಬಸವರಾಜ್ ಪಾಟೀಲ್, ಚಿದಾನಂದ ಭರಮಾ ಬಡಿಗೇರ್, ಅನಿಲ್ ಕುಮಾರ್, ಪ್ರೇಮ್ ಕುಮಾರ್, ಪ್ರಕಾಶ್ ಗೌಡ, ವಿರೇಶ್ ಹಿರೇಮಠ, ಚಂದ್ರಕಾಂತ್, ಮದು, ವಿರುಪಾಕ್ಷ, ವಿಶ್ವನಾಥ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.