-->


ಡಾ.ಪಾದೂರು ಗುರುರಾಜ ಭಟ್  - ನೂರರ ನೆನಪು ಕಾರ್ಯಕ್ರಮ

ಡಾ.ಪಾದೂರು ಗುರುರಾಜ ಭಟ್ - ನೂರರ ನೆನಪು ಕಾರ್ಯಕ್ರಮ



ಕಿನ್ನಿಗೋಳಿ : ಡಾ| ಪಾದೂರು ಗುರುರಾಜ ಭಟ್‌ರವರು ಬರೆದ ಎಲ್ಲಾ  ಗ್ರಂಥಗಳು ಎಲ್ಲಾ ಇತಿಹಾಸಕಾರರಿಗೆ ಅಧ್ಯಯನ ಮಾಡುವವರಿಗೆ  ಆಕರ ಗ್ರಂಥವಾಗಿದೆ  ಅವರ ನೆನಪು ಮಾಡುವುದು ಸ್ಮರಣೆ ಮಾಡುವುದು ಮುಖ್ಯವಾಗಿದೆ  ಎಂದು ಇತಿಹಾಸ ತಜ್ಞ  ಡಾ.ಪುಂಡಿಕಾಯಿ  ಗಣಪಯ್ಯ ಭಟ್ ಹೇಳಿದರು. ಅವರು  ಯುಗಪುರುಷ ಸಭಾಭವನದಲ್ಲಿ  ಯುಗಪುರುಷ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಡಾ.ಪಾದೂರು ಗುರುರಾಜ ಭಟ್‌ರವರ ೧೦೦ರ ನೆನಪು ಕಾರ್ಯಕ್ರಮದಲ್ಲಿ  ಪಾದೂರು ಗುರುರಾಜ ಭಟ್‌ರವರ ನುಡಿನಮನ  ಕಾರ್ಯಕ್ರಮದಲ್ಲಿ  ಹೇಳಿದರು. ಕೊಡೆತ್ತೂರು ನಯನಾಭಿರಾಮ ಉಡುಪ ಕಾರ್ಯಕ್ರಮದ   ಅಧ್ಯಕ್ಷತೆ ವಹಿಸಿದ್ದರು. ಡಾ| ಅಗರಿ ಎಂಟರ್‌ಪ್ರೈಸಸ್‌ನ ಅಗರಿ ರಾಘವೇಂದ್ ಭಟ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು,  ಹಿರಿಯ ಪತ್ರಕರ್ತ ಕೆ. ಎಲ್ ಕುಂಡಂತಾಯ , ನಿವೃತ್ತ ಪ್ರಾಧ್ಯಾಪಕರಾದ ಬಾಲಕೃಷ್ಣ ಉಡುಪ, ಕರ್ನಾಟಕ ಜಾನಪದ ಪರಿಷತ್ತು ಮುಡುಬಿದ್ರೆ ತಾಲೂಕು ಘಟಕದ ಅಧ್ಯಕ್ಷೆ ಪದ್ಮಶ್ರೀ ಭಟ್,  ಪಿ. ವೆಂಕಟೇಶ್ ಭಟ್, ಗುರುಪ್ರಸಾದ್ ಹೊಸಬೆಟ್ಟು , ಸತೀಶ್ ಪುಜಾರಿ ಅಬ್ಬನಡ್ಕ , ಡಾ| ಸೋಮ ಶೇಖರ ಮಯ್ಯ,  ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಸ್ವಾಗತಿಸಿದರು.  ಪು. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾಯ್ಸ್ ಆಫ್ ಆರಾಧನಾತಂಡದವರಿಂದ ಸಂಗೀತಕಾರ್ಯಕ್ರಮ  ನಡೆಯಿತು.

Ads on article

Advertise in articles 1

advertising articles 2

Advertise under the article