ಮೊಬೈಲು ಬಳಕೆಯ ಅರಿವಿಲ್ಲದಿದ್ದರೆ ಅಪಾಯ ಖಂಡಿತ - ಡಾ. ಅನಂತ ಪ್ರಭು
Tuesday, November 26, 2024
ಕಟೀಲು : ಮೊಬೈಲು ಬಳಕೆಯ ಅರಿವಿಲ್ಲದಿದ್ದರೆ ಅಪಾಯ ಖಂಡಿತ ಎಂದು ಡಾ. ಅನಂತ ಪ್ರಭು ಹೇಳಿದರು. ಅವರು ಕಟೀಲು ನುಡಿಹಬ್ಬದ ಮೂರನೆಯ ದಿನವಾದ ಭಾನುವಾರ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತನಾಡಿದರು.ಮೊಬೈಲನ್ನು ಮಲಗುವಾಗ ಇಟ್ಟುಕೊಂಡರೆ ಕ್ಯಾನ್ಸರ್ ಬರುವ ಸಾಧ್ಯತೆ ಜಾಸ್ತಿ ಇದೆ. ಕೆಲವು ಆಪ್ ಗಳು ನಾವು ಮೊಬೈಲು ಪೋನಿನ ಬಳಕೆಯಿಂದ ನಮ್ಮ ಬದುಕನ್ನೇ ನಾಶ ಮಾಡಬಲ್ಲವು. ಮಾನ ಹರಾಜು ಮಾಡಬಲ್ಲದು. ಯಾರು ಕೇಳಿದರೂ ಪೋಟೋ ಕಳುಹಿಸುವ ಮುನ್ನ ಎಚ್ಚರ ತಪ್ಪಬಾರದು. ಸೈಬರ್ ಕ್ರಿಮಿನಲ್ ಗಳನ್ನು ನಮ್ಮ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿ ಮಾಡಿ ನಮ್ಮ ಅಕೌಂಟಿನ ಹಣ ಪಟಾಯಿಸುತ್ತಾರೆ. ಮಾಲ್ ಗಳಲ್ಲಿ ಹೊಸ ಉಡುಪು ಖರೀದಿಸಿ ಡ್ರೆಸ್ಸಿಂಗ್ ರೂಮಿನಲ್ಲಿ ಬದಲಾಯಿಸುವುದೂ ಕೂಡ ಅಪಾಯಕಾರಿ. ತಂತ್ರಜ್ಞಾನದಿಂದ ಬ್ಲಾಕ್ ಮೇಲ್ ಮಾಡಲು ಆರಂಭಿಸುತ್ತಾರೆ. ಖಾಸಗಿ ಪೋಟೋ ತೆಗೆಯಲೇ ಬಾರದು ಎಂದು ಅನಂತಪ್ರಭು ಹೇಳಿದರು.
ನಿವೃತ್ತ ಶಿಕ್ಷಕಿ ಜಲಜಾ, ಕಟೀಲಿನ ಹಳೆವಿದ್ಯಾರ್ಥಿಗಳಾದ ಪ್ರದೀಪ ಆಚಾರ್ಯ, ಡಾ. ನಂದಾ ಜೆ.ಪೈ, ಮೇಘಶ್ರೀ ಶೆಟ್ಟಿ ವೇದಿಕೆಯಲ್ಲಿದ್ದರು.