ದೈನಂದಿನ ಆಹಾರ ಪದ್ಧತಿಯನ್ನು ಅನುಸರಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ - ಡಾ.ಭರತ್ ಕುಮಾರ್
Friday, November 15, 2024
ಮಂಗಳೂರು :ನಮ್ಮ ಆರೋಗ್ಯಕ್ಕೆ ಒಗ್ಗಿಕೊಳ್ಳುವಂತೆ ದೈನಂದಿನ ಆಹಾರ ಪದ್ಧತಿಯನ್ನು ಅನುಸರಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ, ಇದರಲ್ಲಿ ಮಾತೆಯರ ಪಾತ್ರ ಮುಖ್ಯ ಎಂದು ಕಾಟಿಪಳ್ಳ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭರತ್ ಕುಮಾರ್ ಹೇಳಿದರು.
ಅವರು ಕಾಟಿಪಳ್ಳ ಮೂರನೇ ವಿಭಾಗದ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ವತಿಯಿಂದ ನಡೆದ ವಿಶ್ವ ಮಧುಮೇಹ ನಿವಾರಣಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಸ್ಥಳೀಯ ಸದಸ್ಯ ಲೋಕೇಶ್ ಬೊಲ್ಲಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರದ ಅಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರದ ಕಾರ್ಯದರ್ಶಿ ಶೆರಿಲ್ ಪಿಂಟೋ, ಕೋಶಾಧಿಕಾರಿ ಲೋಕೇಶ್, ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮಿ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾಬು ಆಚಾರಿ, ಉಪಾಧ್ಯಕ್ಷೆ ರೇಷ್ಮಾ , ಲಯನ್ಸ್ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ದೀಪಕ್ ಪೆರ್ಮುದೆ , ಉಪಾಧ್ಯಕ್ಷ ಪುಷ್ಪರಾಜ್ ಅಡಪ, ಮಾಜಿ ಅಧ್ಯಕ್ಷ ಉಮಾನಾಥ ಅಮೀನ್, ಮಾಧವ ಶೆಟ್ಟಿ ಬಾಳ, ಸದಸ್ಯ ಪ್ರಶಾಂತ್ ಶೆಟ್ಟಿ, ಶಾಲಾ ಸಹ ಶಿಕ್ಷಕಿಯರಾದ ಪುಷ್ಪ ಬಂಗೇರ, ಶಕುಂತಲಾ , ಶಾಲಾ ವಿದ್ಯಾರ್ಥಿ ನಾಯಕ ಆಯುಷ್ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.
ವಿದ್ಯಾರ್ಥಿ ಉಪನಾಯಕಿ ಕೀರ್ತಿ ಸ್ವಾಗತಿಸಿದರು. ಸಹಶಿಕ್ಷಕಿ ಇಂದಿರಾ ಶ್ರೀಧರ್ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.