-->


ಮೂಲ್ಕಿ ಕಂಬಳ ಸಮಿತಿಯ ಅಮಾನತು ಹಿಂತೆಗೆತ : ದುಗ್ಗಣ್ಣ ಸಾವಂತರು

ಮೂಲ್ಕಿ ಕಂಬಳ ಸಮಿತಿಯ ಅಮಾನತು ಹಿಂತೆಗೆತ : ದುಗ್ಗಣ್ಣ ಸಾವಂತರು


ಹಳೆಯಂಗಡಿ:ನಾಲ್ಕು ಶತಮಾನಗಳ ಹಿನ್ನೆಲೆಯುಳ್ಳ ಮೂಲ್ಕಿ ಸೀಮೆ ಅರಸು ಕಂಬಳವು ಯಾವುದೇ ರೀತಿಯಲ್ಲಿಯೂ ಸಂಪ್ರದಾಯವನ್ನು ಮೀರದೇ ನಡೆಸಬಾರದು ಎಂಬ ಉದ್ದೇಶದಿಂದ ಸಮಿತಿಯ ಬಗ್ಗೆ ಇದ್ದ ಎಲ್ಲಾ ಸಮಸ್ಯೆಯನ್ನು ಸೌಹಾರ್ದತೆಯಲ್ಲಿ ಬಗೆಹರಿಸಲಾಗಿದೆ ಸಮಿತಿಯನ್ನು ಈ ವರ್ಷದಲ್ಲಿ ಮುಂದುವರಿಸಿಕೊಂಡು, ಅದರ ಮೇಲಿನ ಅಮಾನತನ್ನು ಹಿಂದತೆಗೆಯಲಾಗಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.                                                                                                                                                                                                                                                                                                                                                                          ಅವರು ಮೂಲ್ಕಿ ಸೀಮೆಯ ಅರಸು ಆಡಳಿತದ ಮೂಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಅನೇಕ ಹಿರಿಯರು ಅವರ ಸಹನೆ, ಶ್ರಮ ಸಹಿತ ಸಮಿತಿಯ ಮೂಲ ಉದ್ದೇಶವನ್ನು ಮುಂದುವರಿಸಿಕೊಂಡು ಹೋಗಬೇಕು, ಸಮಿತಿಯು ತನ್ನ ಸ್ವ ಇಚ್ಚೆಯಂತೆ ಎಂದಿಗೂ ನಡೆಯಬಾರದು ಎಂಬ ಎಚ್ಚರಿಕೆಯೊಂದಿಗೆ ಹಲವು ವಿಷಯಗಳನ್ನು ಕಂಬಳ ಭವಿಷ್ಯದ ದೃಷ್ಟಿಯಿಂದ ನಿವಾರಿಸಲಾಗಿದೆ. ಕಂಬಳ ಹಾಗೂ ಮೂಲ್ಕಿ ಸೀಮೆಯ ಅರಸರ ಘನತೆ-ಗೌರವವನ್ನು ಎಂದಿಗೂ ಸಾರ್ವಜನಿಕವಾಗಿ ಗೊಂದಲ ಮೂಡಿಸಬಾರದು ಎಂದು ಹೇಳಿದರು. 
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಹಾಗೂ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ಕಿರಣ್‌ಕುಮಾರ್ ಶೆಟ್ಟಿ ಅವರು ಸಮಸ್ಯೆಯನ್ನು ಸೌಹಾರ್ದತೆಯಲ್ಲಿ ನಿವಾರಿಸಲಾಗಿದೆ. ಮುಂದಿನ ದಿನದಲ್ಲಿ ಅರಸು ಕಂಬಳಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದರು. 
ಮಿಥುನ್ ರೈ, ವಸಂತ ಬೆರ್ನಾಡ್, ಗೌತಮ್ ಜೈನ್, ಸುನಿಲ್ ಆಳ್ವ, ಸತೀಶ್ ಅಂಚನ್, ಶಶೀಂದ್ರ ಸಾಲ್ಯಾನ್, ಕುಸುಮಾ ಚಂದ್ರಶೇಖರ್, ಉಮೇಶ್ ಪೂಜಾರಿ ಇದ್ದರು. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article