ಕಟೀಲು ಕಾಲೇಜಿನಲ್ಲಿಜಿಎಸ್ಟಿ, ನೇರತೆರಿಗೆ ಮತ್ತು ಲೆಕ್ಕಪತ್ರನಿರ್ವಹಣೆ ಸರ್ಟಿಫಿಕೇಟ್ ಕೋರ್ಸುಗಳ ಉದ್ಘಾಟನೆ
Wednesday, November 13, 2024
ಕಟೀಲು : ಶ್ರೀದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿಸರಕು ಮತ್ತು ಸೇವಾತೆರಿಗೆ(ಜಿಎಸ್ಟಿ), ನೇರತೆರಿಗೆ ಮತ್ತು ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಪಟ್ಟು ಮೂರು ವಿವಿಧ ಸರ್ಟಿಫಿಕೇಟ್ ಕೋರ್ಸುಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಟೀಲು ದೇವಳದ ಅನುವಂಶಿಕ ಅರ್ಚಕ ಶ್ರೀಕರ ಆಸ್ರಣ್ಣ ಸರ್ಟಿಫಿಕೇಟ್ ಕೋರ್ಸುಗಳನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ತರಗತಿಗಳನ್ನು ನಡೆಸಿಕೊಡಲಿರುವ ಸಿ.ಎ. ಅಶೋಕರಾವ್, ಸಿ.ಎ. ಚರಣ್ ರಾಜ್ ಮುಚ್ಚೂರು, ರವಿರಾಜ ಪೂಜಾರಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ ವಿ., ಉಪನ್ಯಾಸಕರಾದ ಡಾ. ಪದ್ಮನಾಭ ಮರಾಠೆ, ಪ್ರದೀಪ್ ಎಮ್., ಶ್ರೀಮತಿ ಶಿಫಾಲಿ, ಕುಮಾರಿ ಹರಿಣಾಕ್ಷಿ, ವಿದ್ಯಾರ್ಥಿ ನಾಯಕರಾದ ಶಶಾಂಕ್, ಆದಿತ್, ಮನೀಶ್, ತ್ರಿಶಾಶೆಟ್ಟಿ ಉಪಸ್ಥಿತರಿದ್ದರು.ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪೂಜಾ ಯು. ಕಾಂಚನ್ ಸ್ವಾಗತಿಸಿದರು. ಸಂಸ್ಕೃತ ಉಪನ್ಯಾಸಕಿ ಕುಮಾರಿ ಗ್ರೀಷ್ಮಾ ರೈ ವಂದಿಸಿದರು. ವಿದ್ಯಾರ್ಥಿನಿ ಅಶ್ವಿನಿ ಪೈ ನಿರೂಪಿಸಿದರು.