ಶ್ರೀ ಕ್ಷೇತ್ರ ಧರ್ಮಸ್ಥಳದಿಂದಶ್ರೀ ಕ್ಷೇತ್ರ ನೆಲ್ಲಿತೀರ್ಥಕ್ಕೆ ರೂ.5ಲ.ರೂ ಡಿಡಿ ಹಸ್ತಾಂತರ
Wednesday, November 13, 2024
ಬಜಪೆ:ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ರೂಪವಾಗಿ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದ ರೂ.5ಲಕ್ಷದ ಡಿ.ಡಿ.ಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಕಚೇರಿಯ ಅಧಿಕಾರಿ ದುಗ್ಗೆಗೌಡ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಭುವನಾಭಿರಾಮ ಉಡುಪ, ಮಹಾಬಲ ಕುಲಾಲ್, ಯೋಜನಾಧಿಕಾರಿ ಗಿರೀಶ್‌ಕುಮಾರ್, ನೇತ್ರಾವತಿಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿಶ್ರೀ ಕ್ಷೇತ್ರ ನೆಲ್ಲಿತೀರ್ಥದ ಅರ್ಚಕ ಗಣಪತಿ ಭಟ್, ಮೊಕ್ತೇಸರ ಪ್ರಸನ್ನ ಭಟ್, ಆನಂದ ಕಾವ, ಕೃಷ್ಣಪ್ಪ ಪೂಜಾರಿ, ಸಂತೋಷ್ ಸಾಲ್ಯಾನ್, ಪ್ರೇಮ ಸುವರ್ಣ, ಮೀನಾಕ್ಷಿ ಪೂಜಾರಿ, ಜೀರ್ಣೋದ್ಧಾರ ಸಮಿತಿಯ
ಸದಸ್ಯ ದೀಪ್‌ಕಿರಣ್ ಉಪಸ್ಥಿತರಿದ್ದರು.