-->


ಮೂಲ್ಕಿ ಅರಸು ಕಂಬಳವನ್ನು ಸಮಿತಿಯೊಂದಿಗೆ ನಡೆಸಲು ಆಗ್ರಹ

ಮೂಲ್ಕಿ ಅರಸು ಕಂಬಳವನ್ನು ಸಮಿತಿಯೊಂದಿಗೆ ನಡೆಸಲು ಆಗ್ರಹ

ಮೂಲ್ಕಿ:ಮೂಲ್ಕಿ ಸೀಮೆಯ ಪರಂಪರೆಯ ಕಂಬಳವಾಗಿರುವ ಮೂಲ್ಕಿ ಸೀಮೆ ಕಂಬಳವನ್ನು ಸಮಿತಿಯೊಂದಿಗೆ ಸೇರಿಕೊಂಡು ಗ್ರಾಮಸ್ಥರ ಕೂಡುವಿಕೆಯಲ್ಲಿ ನಡೆಸಬೇಕು, ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ಕಂಬಳವನ್ನು ಸುಸೂತ್ರವಾಗಿ ನಡೆಸಬೇಕು, ಜಿಲ್ಲಾ ಸಮಿತಿಯು ಇದಕ್ಕೆ ಮಧ್ಯಸ್ಥಿಕೆಯನ್ನು ವಹಿಸಿಕೊಂಡು, ಅರಸು ವಂಶಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರನ್ನು ಒಗ್ಗೂಡಿಯೇ ನಡೆಸಬೇಕು, ಇದಕ್ಕಾಗಿ ಹಿರಿಯರು ಮುಂದೆ ಬರಬೇಕು ಎಂದು ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ಕಿರಣ್ಕುಮಾರ್ ಶೆಟ್ಟಿ ಹೇಳಿದರು. 
ಅವರು ಮೂಲ್ಕಿಯ ಆಧಿದನ್ ಸಭಾಂಗಣದಲ್ಲಿ ಮೂಲ್ಕಿ ಸೀಮೆಯ ಅರಸು ಕಂಬಳದ ಸಮಿತಿಯನ್ನು ಅಮಾನತು ಮಾಡಬೇಕು ಎಂದು ಅರಸು ವಂಶಸ್ಥರಾದ ದುಗ್ಗಣ್ಣ ಸಾವಂತರು ಹೇಳಿದ್ದರಿಂದ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದರು. 
ಸಮಿತಿಯ ಮೋಹನ್ ಕೋಟ್ಯಾನ್ ಮಾತನಾಡಿ, ಸಮಿತಿಯನ್ನು ಅಮಾನತು ಮಾಡಬೇಕು ಎಂದು ಜಿಲ್ಲಾ ಸಮಿತಿಗೆ ಹೇಳಿರುವ ಸೀಮೆಯ ಅರಸು ವಂಶಸ್ಥರಾದ ದುಗ್ಗಣ್ಣ ಸಾವಂತರು ಇದನ್ನು ಮರು ಪರಿಶೀಲನೆ ನಡೆಸಬೇಕು, ಗ್ರಾಮದ ಜನರ ತ್ಯಾಗವನ್ನು ಅದಕ್ಕೆ ನೀಡಿದ ಕೊಡುಗೆಯನ್ನು ಅರಿತು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕೇ ವಿನಃ ಕಂಬಳ ಒರ್ವನ ಸೊತ್ತಾಗಬಾರದು, ಸಂಘರ್ಷ ಇಲ್ಲದೇ ಪರಿಹಾರ ಕಂಡರೇ ಉತ್ತಮ ಇಲ್ಲದಿದ್ದಲ್ಲಿ ಮಾಗಣೆಯ ಗುತ್ತು ಬಕರ್ೆ ಹಾಗೂ ಪ್ರಮುಖರನ್ನು ಸೇರಿಸಿ ಸಭೆ ನಡೆಸಿ ಪ್ರತಿಭಟನೆ ಮಾಡಲು ಸಹ ತಯಾರಾಗಿದ್ದೇವೆ ಎಂದು ಹೇಳಿದರು. 
ಸುನಿಲ್ ಆಳ್ವಾ ಮಾತನಾಡಿ, ಪರಂಪರೆಯ ಕಂಬಳದಲ್ಲಿ ಸಂಘರ್ಷ ಬೇಡ, ಸೌಹರ್ದತೆಗೆ ಅನುಗುಣವಾಗಿ ಮುಂದುವರಿಯೋಣ, ಅಪಪ್ರಚಾರದಲ್ಲಿ ತೊಡಗಿಕೊಂಡರೇ ಕಂಬಳ ಉಳಿಯುವುದಿಲ್ಲ, ತಪ್ಪು ಒಪ್ಪುಗಳನ್ನು ಸರಿಯಾದ ರೀತಿಯಲ್ಲಿ ಮಾತುಕತೆ ನಡೆಸಿ, ಹಿರಿಯರ ಸಮ್ಮುಖದಲ್ಲಿಯೇ ಪ್ರಮುಖ ಸಭೆ ನಡೆಸಿ ತೀಮರ್ಾನ ತೆಗೆದುಕೊಳ್ಳೋಣ ಅರಸು ವಂಶಸ್ಥರು ಹಾಗೂ ಸಮಿತಿಯ ಪ್ರಮುಖರು ಮಾತ್ರ ಮುಂದೆ ನಿಂತು ಇದನ್ನು ಬಗೆಹರಿಸಬೇಕು ಎಂದರು. 
ಸತೀಶ್ ಭಟ್ ಕೊಳುವೈಲು, ಕೃಷ್ಣ ಶೆಟ್ಟಿಗಾರ್, ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ, ವಿನೋದ್ ಬೊಳ್ಳೂರು ಮತ್ತಿತರರು ಮಾತನಾಡಿದರು. 
ಕುಸುಮಾ ಚಂದ್ರಶೇಖರ್, ರಾಮದಾಸ್ ಶೆಟ್ಟಿ, ಸತೀಶ್ ಅಂಚನ್, ಶ್ಯಾಂಪ್ರಸಾದ್ ಪಡುಪಣಂಬೂರು ಮತ್ತಿತರರು ಇದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article