ಕಿನ್ನಿಗೋಳಿಯಲ್ಲಿ ಟ್ರಾಫಿಕ್ ಕಿರಿಕಿರಿ,ಸಮಸ್ಯೆಗೆ ಕೊನೆ ಎಂದು?
Wednesday, November 13, 2024
ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿನ್ನಿಗೋಳಿ ಬಸ್ ನಿಲ್ದಾಣದಿಂದ ಇಲ್ಲಿನ ಮಾರುಕಟ್ಟೆ ತನಕ ಟ್ರಾಪಿಕ್ ಕಿರಿ ಕಿರಿಯಿಂದ ಸಾರ್ವಜನಿಕರು ದಿನಂಪ್ರತಿ ಸಮಸ್ಯೆಯನ್ನು ಅನುಭವಿಸುವಂತಾಗಿದೆ. ದಿನಂಪ್ರತಿ ಮುಖ್ಯ ಜಂಕ್ಷನ್ ನಿಂದ ಮಾರುಕಟ್ಟೆ ತನಕ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನಗಳನ್ನು ಕಂಡ ಕಂಡಲ್ಲಿ ಪಾರ್ಕ್ ಮಾಡಲಾಗುತ್ತಿದ್ದು,ಹೆದ್ದಾರಿಯಲ್ಲಿ ಸಾಗುವಂತಹ ವಾಹನಗಳ ಸವಾರರು ಪರದಾಡುವಂತಾಗಿದೆ.ಇಲ್ಲಿನ ಸುಖಾನಂದ ವೃತ್ತದ ಸಮೀಪವೂ ಕೂಡ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು,ಕಟೀಲು ಮೂಲಕ ಉಳ್ಳಂಜೆ ಮಾರ್ಗವಾಗಿ ಕಿನ್ನಿಗೋಳಿ ಬರುವಂತಹ ವಾಹನಗಳ ಸವಾರ ರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆಯ ಬಗ್ಗೆ ಹಲವು ಭಾರಿ ಅಧಿಕಾರಿಗಳ ಜೊತೆಗೆ ಸಭೆ ಕೂಡ ನಡೆದಿದ್ದು,ಯಾವುದೂ ಪ್ರಯೋಜನ ವಾಗಿಲ್ಲ.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಸ್ ನಿಲ್ದಾಣದ ಅಸುಪಾಸಿನಲ್ಲಿ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿದ್ದರೂ,ಇಲ್ಲಿ ಮಾತ್ರ ಕೆಲವೊಂದು ವಾಹನಗಳು ಮಾತ್ರ ಪಾರ್ಕ್ ಮಾಡುತ್ತಿರುವುದು ಕಂಡುಬರುತ್ತಿದೆ.ಅಲ್ಲದೆ ಹೆಚ್ಚಿನ ವಾಹನಗಳು ಹೆದ್ದಾರಿಯ ಇಕ್ಕೆಲಗಳಲ್ಲಿಯೇ ಪಾರ್ಕ್ ಮಾಡುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಟ್ರಾಪಿಕ್ ಸಮಸ್ಯೆ ಇದ್ದರೂ ಇದುವರೆಗೂ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ ಅನ್ನುತ್ತಾರೆ ಇಲ್ಲಿನ ನಾಗರೀಕರು.