-->


ತಾ. 19: ಕಟೀಲಿಗೆ ಕಾಂಚಿ ಶ್ರೀ

ತಾ. 19: ಕಟೀಲಿಗೆ ಕಾಂಚಿ ಶ್ರೀ

 


ಕಟೀಲು : ಶ್ರೀ ಕಾಂಚಿ ಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತಾ.19ರ ಮಂಗಳವಾರ ಸಂಜೆ ೬.೩೦ಕ್ಕೆ ಆಗಮಿಸಲಿದ್ದು ಶ್ರೀ ದೇವರ ದರ್ಶನ ಮಾಡಲಿದ್ದಾರೆ. ಈ ಸಂದರ್ಭ ಶ್ರೀಗಳನ್ನು ದೇಗುಲದ ವತಿಯಿಂದ ಗೌರವಿಸಲಾಗುವುದು. ಭಕ್ತರೆಲ್ಲರಿಗೂ ಶ್ರೀ ಗುರುಗಳನ್ನು ಫಲಪುಷ್ಪಾದಿಗಳಿಂದ ಗೌರವಿಸಲು ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ.


ಧರ್ಮಸ್ಥಳದಲ್ಲಿ ಶ್ರೀ ಕಾಂಚಿ ಸ್ವಾಮೀಜಿಯವರನ್ನು ಕಟೀಲು ದೇಗುಲದ ಅರ್ಚಕರಾದ ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಗೌರವಿಸಿ, ಕಟೀಲು ಕ್ಷೇತ್ರಕ್ಕೆ ಆಗಮಿಸುವಂತೆ ವಿನಂತಿಸಿದರು. ಕಾಂಚಿಯ ಹಿರಿಯ ಶ್ರೀಗಳು ದಶಕಗಳ ಹಿಂದೆ ಎರಡು ಬಾರಿ ಕಟೀಲಿಗೆ ಆಗಮಿಸಿದ ಛಾಯಾಚಿತ್ರಗಳನ್ನು ಕಂಡು ಶ್ರೀಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುಬ್ರಹ್ಮಣ್ಯ ಪ್ರಸಾದ್, ಸ್ಕಂದಪ್ರಸಾದ ಕಡಂದಲೆ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article