ಉಳಾಯಿಬೆಟ್ಟು ಪಂಚಾಯತ್‍ನ ಪಂಪ್ ಅಪರೇಟರ್‍ಗೆ ಸನ್ಮಾನ
Saturday, November 16, 2024
ಉಳಾಯಿಬೆಟ್ಟು:ಉಳಾಯಿಬೆಟ್ಟು ಗ್ರಾಮ ಪಂಚಾಯತ್‍ನ 3ನೇ ವಾರ್ಡ್‍ನಲ್ಲಿ ಕಳೆದ 20 ವರ್ಷಗಳಿಂದ ಗೌರವಧನದನ್ವಯ ಕುಡಿಯುವ ನೀರಿನ ಪಂಪ್ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಯೋನಿವೃತ್ತಿ ಹೊಂದಿರುವ ಮುಹಮ್ಮದ್ ಅವರಿಗೆ ಪಂಚಾಯತ್ ವತಿಯಿಂದ ನ. 12ರಂದು ಸನ್ಮಾನ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅನಿತಾ ಕ್ಯಾಥರಿನ್, ಪಂಚಾಯತ್ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.