ರಾಜ್ಯಮಟ್ಟದ 14ರ ವಯೋಮಿತಿಯ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ,ಜಯಲಕ್ಷ್ಮಿ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ
Sunday, November 17, 2024
ಮಂಗಳೂರು:ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನ. 15 ಮತ್ತು 16 ರಂದು ನಡೆದ 2024- 25 ನೇ ಸಾಲಿನ ರಾಜ್ಯಮಟ್ಟದ 14ರ ವಯೋಮಿತಿಯ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆ ಕಾಟಿಪಳ್ಳದ ವಿದ್ಯಾರ್ಥಿನಿ ಜಯಲಕ್ಷ್ಮಿ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ.ನರಸಿಂಹ ಉಪಾಧ್ಯಾಯ ಹಾಗು ಪದ್ಮಲಕ್ಷಿ ದಂಪತಿಯರ ಪುತ್ರಿಯಾಗಿರುವ ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ವಿನ್ಯಾಸ್ ಜಿ ತರಬೇತಿ ನೀಡುತ್ತಿದ್ದಾರೆ.