ನ.10 - ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ-2024,ಬಹು ಮುಖ ಪ್ರತಿಭೆ ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ ಸಚ್ಚೇರಿಗುತ್ತು ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಂಭ್ರಮ
Friday, November 8, 2024
ಮಂಗಳೂರು:ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಬಹಳಷ್ಟು ಮಂದಿ ಕನ್ನಡಿಗರು ಇದ್ದುದರಿಂದ ಅದು ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈ ಸಹಿತ ಹಲವಾರು ಮಂದಿ ಹೋರಾಟ ಮಾಡಿದ್ದರು. ಆದರೆ ಕೇರಳ ಸರಕಾರವು ಕಾಸರಗೋಡನ್ನು ಕೇರಳ ರಾಜ್ಯದ ಒಂದು ಜಿಲ್ಲೆಯನ್ನಾಗಿ ಘೋಷಿಸಿದ ಮೇಲೆ ಕರ್ನಾಟಕ ರಾಜ್ಯದೊಂದಿಗೆ ವಿಲೀನವಾಗುವುದು ತಪ್ಪಿದರೂ ಕನ್ನಡದ ಕಂಪು ಈಗಲೂ ಪಸರಿಸುತ್ತಲೇ ಇದೆ.
ಇದೇ ನ. 10 ರಂದು ಕಾಸರಗೋಡಿನ ಮೀಪು ಗುರಿ ಎಲ್ .ಪಿ ಶಾಲೆಯ ಪ್ರದೇಶದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನವು ನಡೆಯಲಿದೆ.
ಕರ್ನಾಟಕ ರಾಜ್ಯ ಮತ್ತು ಕೇರಳ ರಾಜ್ಯದ ಶಾಲೆಗಳ 1000 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸೇರಿ ತಮ್ಮ ಪ್ರತಿಭೆಯನ್ನು ಪ್ರಸ್ತುತ ಪಡಿಸಲಿದ್ದಾರೆ.
ಸಮ್ಮೇಳನದಲ್ಲಿ ಖ್ಯಾತ ಸಾಹಿತಿಗಳು, ಮಂತ್ರಿಗಳು, ಶಾಸಕರು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸ್ವಾಮಿಗಳು, ಪೋಲೀಸ್ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರುಗಳು, ಉಪನ್ಯಾಸಕರು , ಯಕ್ಷಗಾನ, ನಾಟಕ ಮತ್ತು ಸಂಗೀತಗಾರರು ಹಾಗೂ ಘಟಾನಾಘಟಿಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರುಗು ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.