-->


ಪಿಲಿಪಂಜ ತುಳು ಸಿನಿಮಾಕ್ಕೆ ಕಟೀಲಿನಲ್ಲಿ ಮುಹೂರ್ತ

ಪಿಲಿಪಂಜ ತುಳು ಸಿನಿಮಾಕ್ಕೆ ಕಟೀಲಿನಲ್ಲಿ ಮುಹೂರ್ತ

ಮಂಗಳೂರು:   ಯಸ್ ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿಯಲ್ಲಿ  ತಯಾರಾಗಲಿರುವ  'ಪಿಲಿಪಂಜ' ಚಲನಚಿತ್ರಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವೇದಮೂರ್ತಿ ಅನಂತಪದ್ಮನಾಭ ಅಸ್ರಣ್ಣನವರ ಆಶಿರ್ವಚನದ ಮೂಲಕ ನಡೆಯಿತು.
  ತುಳುರಂಗಭೂಮಿ ಹಾಗೂ ಚಲನಚಿತ್ರದ ನಿರ್ದೇಶಕ, ನಿರ್ಮಾಪಕ  ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಕ್ಯಾಮೆರಾ ಗೆ  ಚಾಲನೆ ನೀಡಿದರು. ಉಮಾನಾಥ ಪೂಜಾರಿ ಚಿತ್ರಕ್ಕೆ ಕ್ಲಾಪ್ ಮಾಡಿದರು.
ಚಿತ್ರದ ನಿರ್ಮಾಪಕ ಪ್ರತೀಕ್ ಪೂಜಾರಿ, ನಿರ್ದೇಶಕ ಭರತ್ ಶೆಟ್ಟಿ, ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ರಮೇಶ್ ರೈ ಕುಕ್ಕುವಳ್ಳಿ, ಧರ್ಮದೈವ ಚಿತ್ರದ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಶ್ರೀಮತಿ ಶರ್ಮಿಳಾ ಉಮಾನಾಥ್, ಶ್ರೀಮತಿ ಬಿಂದಿಯಾ ಪ್ರತೀಕ್ ನೃತ್ಯ ನಿರ್ದೇಶಕ ರಾಜೇಶ್ ಕಣ್ಣೂರು, ಛಾಯಾಗ್ರಾಹಕ ಉದಯ್ ಬಳ್ಳಾಲ್, ಸಹ ನಿರ್ದೇಶಕ ಅಕ್ಷತ್ ವಿಟ್ಲ, ಸಜೇಶ್ ಪೂಜಾರಿ, ಸಂಭಾಷಣೆಕಾರ ಸುರೇಶ್ ವಿಟ್ಲ, ಕಲಾವಿದರಾದ ಪ್ರಕಾಶ್ ಶೆಟ್ಟಿ ಧರ್ಮನಗರ, ನಾಯಕಿ ನಟಿ ದಿಶಾ ರಾಣಿ, ವಿಜಯಹರಿ ರೈ ಕುರಿಯ, ಭಾಸ್ಕರ್ ಮಣಿಪಾಲ, ಸಾಹಸ ನಿರ್ದೇಶಕ ಸುರೇಶ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಸಿನೆಮಾಕ್ಕೆ ಮಂಗಳೂರಿನ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಭೋಜರಾಜ್ ವಾಮಂಜೂರ್, ರವಿ ರಾಮಕುಂಜ, ಸುಂದರ್ ರೈ ಮಂದಾರ, ಶಿವಪ್ರಕಾಶ್ ಪೂಂಜ, ರಕ್ಷಣ್ ಮಾಡೂರು, ರೂಪಶ್ರೀ ವರ್ಕಾಡಿ, ರಾಧಿಕ, ಜಯಶೀಲ ಮಂಗಳೂರು, ದಯಾನಂದ ರೈ ಬೆಟ್ಟಂಪಾಡಿ, ಪ್ರವೀಣ್ ಕೊಡಕ್ಕಲ್, ರಂಜನ್ ಬೋಳಾರ್ ಮೊದಲಾದವರು ಬಣ್ಣ ಹಚ್ಚಲಿದ್ದಾರೆ.

Ads on article

Advertise in articles 1

advertising articles 2

Advertise under the article