ಮೈಸೂರು ವಿಭಾಗಮಟ್ಟದ ಕೋ ಕೋ ಪಂದ್ಯಾಟ,ಕಾಟಿಪಳ್ಳ ಇನ್ಪೆಂಟ್ ಮೇರಿ ಅಂಗ್ಲ ಮಾಧ್ಯಮ ಹಿ.ಪ್ರಾ ಶಾಲೆಗೆ ಪ್ರಶಸ್ತಿ
Friday, November 8, 2024
ಬಜಪೆ:ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಮೈಸೂರು, ಉಪನಿರ್ದೇಶಕ ಕಚೇರಿ ಶಾಲಾ ಶಿಕ್ಷಣ ಇಲಾಖೆ ಮೈಸೂರು, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಹುಣಸೂರು ಮೈಸೂರು ಜಿಲ್ಲೆ ಹಾಗೂ ಟ್ಯಾಲೆಂಟ್ ಶಿಕ್ಷಣ ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕೋಕೋ ಪಂದ್ಯಾಟವು ಹುಣಸೂರು ನಗರಸಭಾ ಮೈದಾನದಲ್ಲಿ ನಡೆಯಿತು. 14 ವರ್ಷ ವಯೋಮಾನದ ಕೆಳಗಿನ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಕಾಟಿಪಳ್ಳ ದ್ವಿತೀಯ ಪ್ರಶಸ್ತಿಯನ್ನು ಪಡೆಯಿತು. ವರ್ಷಿತ್ ಜಿ ಶೆಟ್ಟಿ, ಸವಿತ್ ಜೆ ರೈ, ಎಂ ಅಕ್ಷಯ್ ಇವರು ನ. 14 ರಂದು ಬೆಳಗಾವಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕೋಕೋ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ವಿನ್ಯಾಸ್ ಜಿ ತಂಡದತರಬೇತುದಾರರಾಗಿರುತ್ತಾರೆ.17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ತೃತೀಯ ಸ್ಥಾನ ಪಡೆಯಿತು. ಶ್ರೀಮತಿ ವಿದ್ಯಾಲತಾ ತಂಡದ ತರಬೇತುದಾರರಾಗಿರುತ್ತಾರೆ.