ಪಕ್ಷಿ ಕರೆಯಲ್ಲಿ ಹೆಂಡತಿ ಹಾಗೂ ಮಗುವನ್ನು ಕೊಂದು ಆತ್ಮಹತ್ಯೆ
Saturday, November 9, 2024
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಪಕ್ಷಿಕೆರೆ ಎಂಬಲ್ಲಿ ತಾಯಿ ಹಾಗೂ ಮಗುವನ್ನು ಕೊಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಹಳೆಯಂಗಡಿ ಬಳಿಯಲ್ಲಿ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನ ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದ್ದು , ತನ್ನ ಪತ್ನಿ ಶಿವಮೊಗ್ಗ ಮೂಲದ ಪ್ರಿಯಾಂಕ (28) ಗಂಡು ಮಗು ಹೃದಯ (4) ಇವರಿಗೆ ವಿಷ ನೀಡಿ ಹತ್ಯೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಭಟ್ ಪಕ್ಷಿಕೆರೆ ಮುಖ್ಯ ಜಂಕ್ಷನ್ ನಲ್ಲಿರುವ ಹೋಟೆಲ್ ನ್ನು ತನ್ನ ತಂದೆ ತಾಯಿಯೊಂದಿಗೆ ನಡೆಸುತ್ತಿದ್ದು ಹತ್ತಿರದ ಫ್ಲಾಟ್ ಒಂದರಲ್ಲಿ ವಾಸವಾಗಿದ್ದರು.
ಆತ್ಮಹತ್ಯೆ ಹಾಗೂ ಮಗು ಹಾಗೂ ತಾಯಿಯ ಹತ್ಯೆಯ ಬಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಸಿಗಬೇಕಾಗಿದೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.