ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳು ದೂರವಿರಿ - ಸತೀಶ್ ನಾಯಕ್
Wednesday, November 6, 2024
ಬಜಪೆ:ಸಮಾಜಘಾತಕ ಶಕ್ತಿಗಳು ಮುಗ್ಧ ಮನಸುಗಳನ್ನು ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿ ದೇಶದ ಭವ್ಯ ಭವಿಷ್ಯದ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ.ಪ್ರತಿಯೊಬ್ಬ ವಿದ್ಯಾರ್ಥಿಯು ಇಡೀ ಸಮಾಜಕ್ಕೆ ಅತ್ಯಮೂಲ್ಯ ಸಂಪತ್ತು ಇಂತಹ ದುಶ್ಚಟಗಳಿಗೆ ವಿದ್ಯಾರ್ಥಿಗಳು ಬಳಿಯಾಗದೆ ಸ್ವಸ್ಥ ಮತ್ತು ಬಲಿಷ್ಠ ರಾಷ್ಟ್ರ ಸ್ಥಾಪನೆಗೆ ಅಣಿಯಾಗಬೇಕು ಎಂದು ಮಂಗಳೂರು ಉತ್ತರ ವಲಯ 2 ರ ಅಬಕಾರಿ ಉಪನಿರೀಕ್ಷಕ ಸತೀಶ್ ನಾಯಕ್ ಹೇಳಿದರು.ಅವರು ಬುಧವಾರದಂದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಲ್ಲಿ ಅಬಕಾರಿ ಇಲಾಖೆ ಮಂಗಳೂರು ಉತ್ತರ ವಲಯ -2 ಇವರ ವತಿಯಿಂದ 'ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳು ಹಾಗೂ ಅವುಗಳಿಂದ ದೂರವಿರುವುದು ಹೇಗೆ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮ'ದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಅಬಕಾರಿ ಇಲಾಖೆಯ ಸೋಮೇಶ್ ಹಣಗಂಡಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಇಂದಿರಾ ಎನ್ .ರಾವ್, ಶಿಕ್ಷಕಿಯರಾದ ಶ್ರೀಮತಿ ಪೂರ್ಣಿಮಾ, ಚಿತ್ರಶ್ರೀ ಕೆ ಎಸ್, ಶ್ರೀಮತಿ ಜ್ಯೋತಿ ಬಿ, ಉಪಸ್ಥಿತರಿದ್ದರು. ಶ್ರೀಮತಿ ವಿನ್ನಿ ನಿರ್ಮಲ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.