ದನಗಳವು ಪ್ರಕರಣ ,ಇಬ್ಬರ ಬಂಧನ
Thursday, November 7, 2024
ಬಂಧಿತರನ್ನು ಪೇಜಾವರ ಕೊಂಚಾರು ಕೊಳಂಬೆ, ಬದ್ರಿಯಾನಗರ ನಿವಾಸಿ ಪೈಜಲ್(40), ಉಳ್ಳಾಲ ಕೋಡಿ ನಿವಾಸಿ ಸುಹೈಬ್ ಅಕ್ತರ್ (24)
ಕಾವೂರು ಠಾಣಾ ಪೊಲೀಸರು ಕರ್ನಾಟಕ ಜಾನುವಾರು ಹತ್ಯ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ- 2020 ಕಲಂ 303(1) ಬಿ ಎನ್ ಎಸ್ 2023 ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸಿ ಇಬ್ಬರನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿರುವ ಕಾರು ಹಾಗೂ ಫ್ಯಾಸಿನೋ ಸ್ಕೂಟರ್ ಅನ್ನು ಸ್ವಾಧಿನಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ.
ಪೈಜಲ್ ವಿರುದ್ಧ ಬಜಪೆ ಠಾಣೆಯಲ್ಲಿ 7, ಶಿವಮೊಗ್ಗದ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ 2, ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 1, ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ದನ ಕಳವು ಪ್ರಕರಣ ದಾಖಲಾಗಿದೆ.