ತೋಕೂರು:7 ನೇ ವರ್ಷದ ಅಮ್ಮನಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ.
Monday, October 7, 2024
ತೋಕೂರು:ನವ ರಾತ್ರಿಯ ದಿನದಲ್ಲಿ ನಮ್ಮ ಮನಸ್ಸಿನಲ್ಲಿ ಭಕ್ತಿಯ ಸನ್ಮಾರ್ಗದತ್ತ ಸಾಗಲು ವಿಶೇಷ ಆರಾಧನೆ ನಡೆಸಿದರೆ ಯಶಸ್ಸು ಸಾದ್ಯವಿದೆ ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷ ದೀಪಕ್ ಸುವರ್ಣ ಹೇಳಿದರು.ಅವರು ಭಾನುವಾರದಂದು ಜಿಲ್ಲಾ, ರಾಜ್ಯ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ 2021ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ತೋಕೂರು, ಹಳೆಯಂಗಡಿ, ಇದರ ಸಹಕಾರದಲ್ಲಿ
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ ತೋಕೂರು, ಹಳೆಯಂಗಡಿ ದೇವಳದಿಂದ- ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ 7 ನೇ ವರ್ಷದ ಅಮ್ಮನೆಡೆಗೆ ನಮ್ಮ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಭಾನುವಾರ ಮುಂಜಾನೆ 5.30 ಕ್ಕೆ ಶ್ರೀ ಕ್ಷೇತ್ರ ತೋಕೂರಿನಿಂದ ಪಾದಯಾತ್ರೆಯು ಆರಂಭಗೊಂಡಿತು. ದಾರಿಯುದ್ದಕ್ಕೂ ಭಜನೆಯ ಹಾಡುಗಳನ್ನು, ದೇವರ ನಾಮ ಸ್ಮರಣೆಯನ್ನು ಮಾಡುತ್ತಾ ಬೆಳಿಗ್ಗೆ 7:15ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತಲುಪಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.