ಕಟೀಲಿನಲ್ಲಿ ನವರಾತ್ರಿ ಉತ್ಸವಾಂಗ ಸಾಂಸ್ಕೃತಿಕ ವೈವಿಧ್ಯ
Sunday, October 6, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದನದಲ್ಲಿ ನವರಾತ್ರಿ ಉತ್ಸವಾಂಗ ಭಾನುವಾರ ದಿನವಿಡೀ ನಾನಾ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದವು.
ಕೊಳಲು, ಶಾಸ್ತ್ರೀಯ ಸಂಗೀತ. ಭರತನಾಟ್ಯ, ಬಡಗುತಿಟ್ಟು ಯಕ್ಷಗಾನ ಹೀಗೆ ನೂರಕ್ಕೂ ಹೆಚ್ಚು ಕಲಾವಿದರಿಂದ ನಡೆದ ಸಾಂಸ್ಕೃತಿಕ ವೈವಿಧ್ಯವನ್ನು ಕಲಾಪೋಷಕ
ಸಿಎ ಸಿತ್ಲ ದಿವಾಕರ ರಾವ್ ಬೆಂಗಳೂರು, ಸಿತ್ಲ ಪ್ರಭಾಕರ ರಾವ್ ಬೆಂಗಳೂರು ಉದ್ಘಾಟಿಸಿದರು. ಕಲಾಮಾತೆಯ ಸನ್ನಿಧಿಯಲ್ಲಿ ನಡೆಯುವ ಕಲಾರಾಧನೆ ಶ್ರೀ ಭ್ರಮರಾಂಬೆಯನ್ನು ಪ್ರಸನ್ನಗೊಳಿಸಲಿ. ಕಲಾವಿದರಿಗೆ ಇನ್ನಷ್ಟು ಅವಕಾಶಗಳು ಒದಗಿಬರಲಿ ಎಂದು ಶುಭಹಾರೈಸಿದರು.
ರವಿಶಂಕರ್ ಬೆಂಗಳೂರು, ಸಾಯಿ ನಾರಾಯಣ್ ಕಲ್ಮಡ್ಕ. ಕೃಷ್ಣಗೋಪಾಲ್ ಪುಂಜಾಲಕಟ್ಟೆ ಕಟೀಲು ಜ್ಯೋತಿ ಉಡುಪ ಮತ್ತಿತರರು ಉಪಸ್ಥಿತರಿದ್ದರು.
ಚಿನ್ಮಯೀ ಪೆಜತ್ತಾಯ, ಮೇಧಾ. ಪ್ರಣವ್ ಅಡಿಗ ಇವರಿಂದ ಕೊಳಲು. ಅನುಶ್ರೀ ಮಳಿ, ಪ್ರಜ್ಞಾ ನಿಡ್ವಣ್ಣಾಯ, ಸ್ವಪ್ನಾ ಕೊಳತ್ತಾಯ, ದೇವಸೇನಾ, ಸುಪ್ರೀತಾ ವರ್ಚಸ್ ಇವರಿಂದ ಶಾಸ್ತ್ರೀಯ ಹಾಡುಗಾರಿಕೆ, ರಮ್ಯಾ ಪುನೀತ್ ಬಳಗ, ವಿದುಷಿ ಮಮತಾ ಬೆಂಗಳೂರು, ಚಿತ್ರನಟಿ ತನ್ವೀ ರಾವ್, ವಿದುಷಿ ಪವಿತ್ರಾ ಅಶೋಕ್ ಇವರಿಂದ ಭರತನಾಟ್ಯ ಕಾರ್ಯಕ್ರಮ ಸಂಪನ್ನಗೊಂಡಿತು.
ಯಕ್ಷಪಲ್ಲವಿ ಯಕ್ಷಗಾನ ತಂಡ ಮಾಳಕೋಡ್ ಇವರಿಂದ ಯಕ್ಷಮಿತ್ರರು ಕಟೀಲು ಇವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ನಡೆಯಿತು.