ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ,ಕಾಟಿಪಳ್ಳ ಇನ್ಪೆಂಟ್ ಮೇರಿ ಶಾಲೆ ಬಾಲಕರ ತಂಡ ಪ್ರಥಮ
Saturday, October 5, 2024
ಮಂಗಳೂರು:ಕಪಿತಾನಿಯೋ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಶಾಲಾ ಜಿಲ್ಲಾಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಇನ್ಫೆಂಟ್ ಮೇರಿ ಶಾಲೆ ಕಾಟಿಪಳ್ಳ ಬಾಲಕರ ತಂಡವು ಪ್ರಥಮ ಸ್ಥಾನ ಗಳಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಇನ್ಫೆಂಟ್ ಮೇರಿ ಶಾಲೆ ಕಾಟಿಪಳ್ಳ ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಇನ್ಫೆಂಟ್ ಮೇರಿ ಶಾಲೆಯು ದ್ವಿತೀಯ ಸ್ಥಾನವನ್ನು ಗಳಿಸಿತು. ತಂಡದ ಜಯಲಕ್ಷ್ಮಿ , ಶೈಲಿ ಹಾಗೂ ಕನಿಕ ಇವರು ಮೈಸೂರಿನಲ್ಲಿ ನಡೆಯಲಿರುವ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಪ್ರಶಸ್ತಿಯಲ್ಲಿ
ಬಾಲಕರ ವಿಭಾಗದಲ್ಲಿ ಇನ್ಫೆಂಟ್ ಮೇರಿ ಶಾಲೆಯ ಆದಿತ್ಯ ಪೀಟರ್ ಲಕ್ರ ಉತ್ತಮ ಸವ್ಯಸಾಚಿ ಆಟಗಾರ ಪ್ರಶಸ್ತಿ, ವರ್ಷಿತ್.ಜಿ. ಶೆಟ್ಟಿ ಉತ್ತಮ ಹಿಡಿತಗಾರ ಪ್ರಶಸ್ತಿ, ಹಾಗೂ ಬಾಲಕಿಯರ ವಿಭಾಗದಲ್ಲಿ ಶೈಲಿ ಉತ್ತಮ ಓಟಗಾರ್ತಿ ಪ್ರಶಸ್ತಿಯನ್ನು ಪಡೆದರು.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಸಂಚಾಲಕರು, ಮುಖ್ಯೋಪಾಧ್ಯಾನಿಯವರು, ಸಹ ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿದರು.