ವೈದ್ಯನಾಥ ಟೈಗರ್ಸ್ ಮುಲ್ಕಿ - 'ಪ್ರಥಮ ವರ್ಷದ ಹುಲಿ ' ಕಾರ್ಯಕ್ರಮ ಉದ್ಘಾಟನೆ
Tuesday, October 8, 2024
ಮುಲ್ಕಿ :ವೈದ್ಯನಾಥ ಟೈಗರ್ಸ್ ಮುಲ್ಕಿ ಇದರ ಪ್ರಥಮ ವರ್ಷದ ಹುಲಿ ಉದ್ಘಾಟನಾ ಕಾರ್ಯಕ್ರಮವು ಅಂಬೇಡ್ಕರ್ ಭವನ ಕಾರ್ನಾಡ್ ಸಭಾಭವನದಲ್ಲಿ ನಡೆಯಿತು . ಮುಲ್ಕಿಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಕಾಂಗ್ರೆಸ್ ಯುವ ನಾಯಕ ,ಸಾಮಾಜಿಕ ಕಾರ್ಯಕರ್ತ ಶರತ್ ಕುಮಾರ್ ಕಾರ್ನಾಡ್, ರಮೇಶ್, ಮುನ್ನ, ಜಯ,ಲೋಕೇಶ್, ಮಧುಶ್ರೀ, ಪಲ್ಲವಿ , ಸಂಜನಾ, ಧನುಶ್ರೀ ಹಾಗೂ ಮೊದಲಾದವರು ಉಪ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಹುಲಿ ವೇಷದಾರಿ ಕರುಣಾಕರ, ಆನಂದ್ ಅವರನ್ನು ಸನ್ಮಾನಿಸಲಾಯಿತು.