ಶ್ರೀ ಚಾಮುಂಡೇಶ್ವರೀ ದೇವಿ ಸನ್ನಿಧಿ ಪಂಜ ಕೊಯಿಕುಡೆಯಲ್ಲಿ ಶರನ್ನವರಾತ್ರಿ ಮಹೋತ್ಸವ,ಧಾರ್ಮಿಕ ಕಾರ್ಯಕ್ರಮಗಳು
Tuesday, October 8, 2024
ಕಿನ್ನಿಗೋಳಿ : ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿ ಪಂಜ ಕೊಯಿಕುಡೆ ಇದರ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಲಲಿತ ಪಂಚಮಿಯಂದು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಂಡಿಕಾ ಹೋಮವು ಪಂಜ ಮಹಾ ಗಣಪತಿ ಮಂದಿರದ ಸುರೇಶ್ ಭಟ್ ಮತ್ತು ಪ್ರಧಾನ ಅರ್ಚಕರಾದ ಕಾರ್ತಿಕೇಯ ಭಾರ್ಗವ ಇವರ ನೇತೃತ್ವದಲ್ಲಿ ವಿದ್ವಾನ್ ವೇದಮೂರ್ತಿ ಪ್ರಸನ್ನ ತಂತ್ರಿ ಏದಾಡಿ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಸನ್ನಿಧಿಯಲ್ಲಿ ಮಧ್ಯಾಹ್ನ ದೇವಿಯ ಮಹಾಪೂಜೆ, ದೇವಿ ದರ್ಶನ, ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಸಂಘ ಸಂಸ್ಥೆಗಳಿಂದ ಭಜನ ಕಾರ್ಯಕ್ರಮ ನಡೆಯಿತು.