ಪೆರ್ಮುದೆಯಲ್ಲಿ ರಕ್ತದಾನ ಶಿಬಿರ
Tuesday, October 8, 2024
ಬಜಪೆ: ಶಿವಾಯ್ ನಾಸಿಕ್ ಬ್ಯಾಂಡ್ ಮತ್ತು ಶ್ರೀ ಸೋಮನಾಥೇಶ್ವರ ಕ್ರಿಕೆಟರ್ಸ್ ಪೆರ್ಮುದೆ ಹಾಗೂ ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ಇದರ ಜಂಟಿ ಆಶ್ರಯದಲ್ಲಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಪೆರ್ಮುದೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ನಡೆಯಿತು.
ಈ ಸಂದರ್ಭ ನಿವೃತ್ತ ಯೋಧ ಮೋಹನದಾಸ್, ಪೆರ್ಮುದೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸರೋಜ, ಲಯನ್ಸ್ ಕ್ಲಬ್ ಕಾಟಿಪಳ್ಳ ಕೃಷ್ಣಾಪುರ ದ ಮಾಜಿ ಅಧ್ಯಕ್ಷ ದೀಪಕ್ ಪೆರ್ಮುದೆ , ನವೀನ್ ಚಂದ್ರ ಶೆಟ್ಟಿ , ನವೀನ್ ಅಮೀನ್ ಕುಂಟಪದವು, ಇಂದಿರಾ ಮೋಹನ್ ದಾಸ್, ಸೋಮನಾಥೇಶ್ವರ ಕ್ರಿಕೆಟರ್ಸ್ ನ ಅಧ್ಯಕ್ಷ ಪ್ರಕಾಶ್, ಗೌರವ ಅಧ್ಯಕ್ಷ ಕೃಷ್ಣ, ಪದಾಧಿಕಾರಿಗಳಾದ ವಿಜಯಕುಮಾರ್, ಪಾಂಡುರಂಗ, ಮುಕುಂದ, ಮನೋಜ್,ಗಣೇಶ್, ವಸಂತ, ಕಿಶೋರ್ ಕೋಟ್ಯಾನ್, ಸಂದೇಶ ಪೂಜಾರಿ, ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಿಯಾ, ಟೆಕ್ನಿಷನ್ ರಕ್ಷಿತಾ, ಶ್ರಾವ್ಯ, ಕಾವ್ಯ, ಪ್ರಜ್ವಲ್, ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.