
ಅ.10 ರಿಂದ 12 ರತನಕ ಬಜಪೆ ಶ್ರೀ ಶಾರದೋತ್ಸವ ಸಮಿತಿಯಿಂದ 32ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ
Thursday, October 10, 2024
ಬಜಪೆ: ಶ್ರೀ ಶಾರದೋತ್ಸವ ಸಮಿತಿ, ಬಜಪೆ ಇದರ ವತಿಯಿಂದ ಕೇಂದ್ರ ಮೈದಾನದ ಸಮೀಪದ ಶ್ರೀ ಶಕ್ತಿ ಮಂಟಪದಲ್ಲಿ 32ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 10ರಿಂದ 12ರ ವರೆಗೆ ನಡೆಯಲಿದೆ.
ಅ.10ರಂದು ಇಲ್ಲಿನ ವಿಜಯ ವಿಟ್ಠಲ ಭಜನ ಮಂದಿರದಿಂದ ಶ್ರೀ ಶಾರದಾಂಬೆಯ ವಿಗ್ರಹವನ್ನು ದಂಡಿ ಮೆರವಣಿಗೆಯಲ್ಲಿ ಬಜಪೆ ಶ್ರೀ ಶಕ್ತಿ ಮಂಟಪಕ್ಕೆ ತಂದು, ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ಬಳಿಕ ಸ್ಯಾಕ್ರೋಫೋನ್ ಕಚೇರಿ, ಭಜನಾ ಕಾರ್ಯಕ್ರಮ, ಮಧ್ಯಾಹ್ನ ಯಕ್ಷಗಾನ-ವೈಭವ, ಸಂಜೆ 6ಕ್ಕೆ ಮಹಾಪೂಜೆ, 7ಕ್ಕೆ ನೃತ್ಯ ಕಾರ್ಯಕ್ರಮ 8ಕ್ಕೆ ತರುಣ ಶಕ್ತಿ ಕಲಾವಿದರು, ಕೊಡೆತ್ತೂರು ಇವರಿಂದ 'ಮದಿಮೆದ ಇಲ್ಲಡ್' ತುಳು ಹಾಸ್ಯಮಯ ನಾಟಕ, ಅ. 11ರಂದು ಬೆಳಗ್ಗೆ 9.30ರಿಂದ ಭಜನ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ, 1ರಿಂದ ಅನ್ನಸಂತರ್ಪಣೆ, 2ರಿಂದ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ 'ವೀರ ಭಾರ್ಗವ' ಯಕ್ಷಗಾನ, ಸಂಜೆ 6.15ಕ್ಕೆ ನೃತ್ಯ ಕಾರ್ಯಕ್ರಮ, 8.30ರಿಂದ ಧಾರ್ಮಿಕ ಸಭೆ, 9.30ರಿಂದ ನೃತ್ಯ ಕಾರ್ಯಕ್ರಮ. ಅ. 12ರಂದು ಬೆಳಗ್ಗೆ ಭಜನ ಕಾರ್ಯಕ್ರಮ, 10ರಿಂದ 'ಭೀಷ್ಮ ವಿಜಯ' ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಚೆಂಡೆವಾದನ ಮಹಾಪೂಜೆಯ ಬಳಿಕ 5.30ರಿಂದ 'ಶ್ರೀ ಶಾರದ ಮಾತೆಯ ಭವ್ಯ ಶೋಭಾಯಾತ್ರೆ' ನಡೆಯಲಿದೆ.