ಯುಗಪುರುಷ ಪತ್ರಿಕೆಯ 78ನೇ ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ
Friday, October 11, 2024
ಕಟೀಲು:ಕಿನ್ನಿಗೋಳಿಯಿಂದ ಪ್ರಕಟಗೊಳ್ಳುವ ಕರ್ನಾಟಕ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಯುಗಪುರುಷ ಪತ್ರಿಕೆಯ 78ನೇ ದಸರಾ ದೀಪಾವಳಿ ವಿಶೇಷಾಂಕವನ್ನು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಶ್ರೀಕ್ಷೇತ್ರ ಕಟೀಲಿನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಟೀಲು ದೇವಳದ ಪ್ರಧಾನ ಅರ್ಚಕರುಗಳಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ತನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಯುಗಪುರುಷ ಪತ್ರಿಕೆಯ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಯಾದವ ದೇವಾಡಿಗ, ಈಶ್ವರ ಕಟೀಲ್, ಕಸ್ತೂರಿ ಪಂಜ, ಆದರ್ಶ್ ಶೆಟ್ಟಿ, ಗುರುರಾಜ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.