-->


ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು (ಕೆ. ಎಂ. ಶೆಟ್ಟಿ.)ಯವರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು (ಕೆ. ಎಂ. ಶೆಟ್ಟಿ.)ಯವರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ

ಮೂಲ್ಕಿ: ಮೂಲ್ಕಿ ಸುಂದರರಾಮ ಶೆಟ್ಟಿ ಟ್ರಸ್ಟ್ ಮತ್ತು ಮೂಲ್ಕಿ ಬಂಟರ ಸಂಘದಿಂದ ಕೊಡಮಾಡುವ 2023-24 ನೇ ಸಾಲಿನ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದ ಸಾಧಕ  ಕೈಗಾರಿಕೋದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಆಯ್ಕೆಯಾಗಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ದೃಷ್ಟಿಯಿಂದ, ಕೇವಲ 78 ಮಕ್ಕಳಿದ್ದ ಮಧ್ಯ ಸರಕಾರಿ ಶಾಲೆಯನ್ನು ಅಂಗ್ಲ‌ಮಾಧ್ಯಮ ಮಾಡಿ, ಹಲವಾರು ಸವಲತ್ತುಗಳು ಮತ್ತು‌ ಪಠ್ಯೇತರ ಚಟುವಟಿಕೆಗಳನ್ನು ಜೋಡಣೆ ಮಾಡಿ ಪ್ರಸ್ತುತ 700 ಅಧಿಕ ವಿದ್ಯಾರ್ಥಿಗಳನ್ನುಹೊಂದಿರುವ ಪಡೆದ ಶಾಲೆ ಎಂಬ ಹೆಗ್ಗಳಿಕೆ ಗೆ ಪಾತ್ರವಾ ಗಿದೆ. ಉದ್ಯಮದಲ್ಲೂ ಯಶಸ್ಸು ಕಂಡ ಶೆಟ್ಟರು ಹಲವಾರಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲ್ಕಿಯಲ್ಲಿ
ಕಳೆದ ಹಲವು ವರ್ಷಗಳಿಂದ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ ನಡೆಯುತ್ತಿದ್ದು ಸಾಮಾಜಿಕ ಕ್ಷೇತ್ರದಲ್ಲಿನ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಮೂಲ್ಕಿ ಬಂಟರ ಸಂಘದ ಸಭಾಭವನದಲ್ಲಿ ಅ 13 ಕ್ಕೆ ಭಾನುವಾರ ಬೆಳಿಗ್ಗೆ ನಡೆಯಲಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article