ಕಟೀಲು: ಮಹಾನವರಾತ್ರಿ ಪ್ರಯುಕ್ತ ದೇವಳದಲ್ಲಿ ಭಕ್ತರಿಗೆ ಮೂಡೆ ಪ್ರಸಾದ
Sunday, October 13, 2024
ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶನಿವಾರ ಮಹಾನವರಾತ್ರಿ ಪ್ರಯುಕ್ತ ಐನೂರಕ್ಕೂ ಆರತಿಗಳನ್ನೊಳಗೊಂಡ ಎರಡು ಗಂಟೆಗಳಿಗೂ ಹೆಚ್ಚಾಗಿ ನಡೆದ ಮಹಾರಂಗ ಪೂಜೆಯನ್ನು ಸಹಸ್ರಾರು ಭಕ್ತರು ಕಣ್ಣುಂಬಿಕೊಂಡು ಧನ್ಯರಾದರು.
ಹತ್ತಾರು ಜಾಗಟೆ ವಾದ್ಯ ಶಂಖ ಚೆಂಡೆಗಳನ್ನು ನುಡಿಸಿ ವೈಭವದೊಂದಿಗೆ ನಡೆದ ಮಹಾರಂಗಪೂಜೆಯ ಬಳಿಕ ಸಹಸ್ರಾರು ಭಕ್ತರು ಮೂಡೆ ಪ್ರಸಾದವನ್ನು ಸ್ವೀಕರಿಸಿದರು.
ಶುಕ್ರವಾರ ಹಾಗೂ ಶನಿವಾರ ಎರಡೂ ದಿನಗಳಲ್ಲಿ ಎರಡು ಸಾವಿರಕ್ಕು ಹೆಚ್ಚು ವಾಹನಗಳಿಗೆ ಪೂಜೆ ನಡೆಯಿತು.