-->


ಮುಲ್ಕಿ: ನವೀಕರಣಗೊಂಡ ಹಿಂದೂ ರುದ್ರಭೂಮಿ ಲೋಕಾರ್ಪಣೆ

ಮುಲ್ಕಿ: ನವೀಕರಣಗೊಂಡ ಹಿಂದೂ ರುದ್ರಭೂಮಿ ಲೋಕಾರ್ಪಣೆ



ಮುಲ್ಕಿ: ಶಿಥಿಲಾವಸ್ಥೆಯಲ್ಲಿದ್ದ ಮುಲ್ಕಿ ಸಾರ್ವಜನಿಕ ಹಿಂದೂ ರುದ್ರಭೂಮಿ ನವೀಕರಣಗೊಂಡಿದ್ದು  ಸೋಮವಾರ ಶಾಸಕ ಉಮಾನಾಥ ಕೋಟ್ಯಾನ್ ರುದ್ರಭೂಮಿಯ ಪರಿಸರದಲ್ಲಿ ಗಿಡ ನೆಡುವ ಮೂಲಕ ಲೋಕಾರ್ಪಣೆಗೊಳಿಸಿದರು
 ಈ ಸಂದರ್ಭ ಅವರು ಮಾತನಾಡಿ ಊರಿಗೊಂದು ರುದ್ರ ಭೂಮಿ ಅಗತ್ಯವಾಗಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಸಜ್ಜಿತವಾದ ಹಿಂದೂ ರುದ್ರ ಭೂಮಿ ನಿರ್ಮಾಣವಾಗಿದ್ದು ಪರಿಸರ ಸ್ವಚ್ಛತೆ ಕಾಪಾಡುವ ಮೂಲಕ ರುದ್ರ ಭೂಮಿಯ ರಕ್ಷಣೆ ಗ್ರಾಮದ ಜನತೆಯ ಜವಾಬ್ದಾರಿ ಎಂದರು.
ಈ ಸಂದರ್ಭ ದಾನಿ ಉದ್ಯಮಿ ಅರವಿಂದ ಪೂಂಜಾ ಪ್ರಸ್ತಾವಿಕವಾಗಿ ಮಾತನಾಡಿ ಸುಮಾರು 6 ಲಕ್ಷ ವೆಚ್ಚದಲ್ಲಿ ಹಿಂದೂ ರುದ್ರ ಭೂಮಿ ನವೀಕರಣಗೊಂಡಿದ್ದು, ರುದ್ರ ಭೂಮಿಯ ಚಿತಾಗಾರ  ನವೀಕರಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುಮಾರು 1.52 ಲಕ್ಷ  ಹಾಗೂ ದಾನಿ ಅರವಿಂದ ಪೂಂಜಾ ಸ್ವಂತ ನೆಲೆಯಲ್ಲಿ ನೂತನ ಸಿಲಿಕಾನ್ ಬಾಕ್ಸ್, ನಾಮಫಲಕ ಹಾಗೂ ಪ್ರಾಣ ಪ್ರತಿಷ್ಠಾನ ವತಿಯಿಂದ ಸಂಜೀವಿನಿ ಯೋಜನೆಯಡಿ ರುದ್ರ ಭೂಮಿಯ ಸುತ್ತಲೂ ನೂತನ ಉದ್ಯಾನವನ ನಿರ್ಮಾಣ, ಸ್ವಚ್ಛತೆ ಕಾಪಾಡಲು ( ಕಸ, ಕಡ್ಡಿ ವಿಲೇವಾರಿಗೆ ) ಪ್ರತ್ಯೇಕ ಬಾಕ್ಸ್ ಅಳವಡಿಸಲಾಗಿದೆ  ಎಂದರು 
ಈ ಸಂದರ್ಭ ಡಾ. ಸಂದೀಪ್ ರಾವ್ ಬಪ್ಪನಾಡು, ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ,ಮಾಜೀ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಸುಭಾಷ್ ಶೆಟ್ಟಿ, ಹರ್ಷರಾಜ್ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ,ಮುಖ್ಯಾಧಿಕಾರಿ ಮಧುಕರ್ ,ಧ.ಗ್ರಾ.ಯೋ. ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸೇವಾ ಪ್ರತಿನಿಧಿ ಶಾಲಿನಿ, ಸ್ಥಳೀಯರಾದ ವೈ ಎನ್ ಸಾಲ್ಯಾನ್, ರಂಗನಾಥ ಶೆಟ್ಟಿ, ಕಿರಣ್ ಶೆಟ್ಟಿ ಕೋಲ್ನಾಡ್ ಗುತ್ತು, ಶಶೀoದ್ರ ಸಾಲ್ಯಾನ್, ಪ್ರವೀಣ್ ಕೋಟ್ಯಾನ್ ಕಾರ್ನಾಡ್ ಧರ್ಮಸ್ಥಾನ, ಉದಯಕುಮಾರ್ ಶೆಟ್ಟಿ ಅಧಿಧನ್, ದೇವಿಪ್ರಸಾದ್ ಕೆಂಪುಗುಡ್ಡೆ, ವಿಠಲ್ ಎನ್ ಎಂ, ಶ್ಯಾಮ್ ಪ್ರಸಾದ್,
ಪ್ರಾಣ ಪ್ರತಿಷ್ಠಾನದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article