ಕ್ರೀಡೆಯಲ್ಲಿ ಆಸಕ್ತಿಯುಳ್ಳವರಿಗೆ ಪ್ರೋತ್ಸಾಹ ನೀಡಿ - ಸಾಮುವೆಲ್ ಜಯಕರ್ ಮುತ್ತು.
Monday, October 28, 2024
ಹಳೆಯಂಗಡಿ:ಕ್ರೀಡೆಗಳಲ್ಲಿ ಆಸಕ್ತಿ ಉಳ್ಳವರಿಗೆ ಉತ್ತಮ ಪ್ರೋತ್ಸಾಹ ನೀಡಿ.ಅವರು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ವಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೋಚ್ ಸಾಮ್ವೆಲ್ ಜಯಕರ್ ಮುತ್ತು ಹೇಳಿದರು.
ಅವರು ಹಳೆಯಂಗಡಿಯ ಸಿಎಸ್ಐ ಅಮ್ಮನ್ ಮೆಮೊರಿಯಲ್ ಚರ್ಚ್ ನ ಬೆಳೆ ಕಾಣಿಕೆ ಹಬ್ಬದ ಆಟೋಟ ಪಂದ್ಯಾಟದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕ್ರೀಡಾಕೂಟವನ್ನು ಸಿಎಸ್ಐ
ಕೆ ಎನ್ ಡಿ ನಿವೃತ್ತ ಸಭಾಪಾಲಕ ರಾದ ರೇ.ಡೇನಿಯಲ್ ಹೊನೇಕರ್ ಉದ್ಘಾಟಿಸಿ ಪ್ರಾರ್ಥನೆ ನೆರೆವೇರಿಸಿದರು.
ಹಳೆಯಂಗಡಿ ಸಿಎಸ್ಐ ಅಮ್ಮನ್ ಮೆಮೋರಿಯಲ್ ಚರ್ಚಿನ ಸಭಾ ಪಾಲಕರಾದ ರೆವೆರೆಂಡ್ ಅಮೃತ ರಾಜ್ ಖೋಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಪಣಂಬೂರು
ಸಿಎಸ್ಐ ಚರ್ಚಿನ ಸಭಾ ಪಾಲಕರಾದ ರೆವೆರೆಂಡ್ ಸಂಧ್ಯಾ ಖೊಡೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಾಟ ಸಮಿತಿಯ ಕಾರ್ಯದರ್ಶಿ ವಿನ್ಸೆಂಟ್ ಸಾಮುವೆಲ್ ಕರ್ಕಡ ಸ್ವಾಗತಿಸಿದರು. ಕೋಶಾಧಿಕಾರಿ ಎಲಿಜಬೆತ್ ಅಂಡ್ರೋಸ್ ಮತ್ತು ಜೊತೆ ಕಾರ್ಯದರ್ಶಿ ಗಾಡ್ ಫ್ರೇ ಉದಯ ಬರ್ನಾಡ್ ಅವರು ವಿಜೇತರ ಪಟ್ಟಿಯನ್ನು ವಾಚಿಸಿದರು. ಜೊತೆ ಕೋಶಾಧಿಕಾರಿ ಸುರೇಖಾ ಸಾಲಿನ್ಸ್ ವಂದಿಸಿದರು.